ಕಾಪು: ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕಾಪು ತಾಲೂಕಿನ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಶೋಭಾ ಪೂಜಾರಿಯ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ವಾರದ ಹಿಂದೆ ಸುರಿದ ವಿಪರೀತ ಗಾಳಿ ಮಳೆಗೆ ಮನೆಯ ಗೋಡೆ ಶೋಭಾ ಪೂಜಾರಿ ಮೇಲೆ ಬಿದ್ದು ಇದೀಗ ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವರು. ಕಡು ಬಡತನದ ಈ ಕುಟುಂಬಕ್ಕೆ ಆಸ್ಪತ್ರೆಯ ವೆಚ್ಚ ಭರಿಸಲು ಅಸಾಧ್ಯವಾಗಿದ್ದು, ದಿಕ್ಕೇ ಕಾಣದಂತೆ ಸಹೃದಯಿ ದಾನಿಗಳಾದ ತಮ್ಮ ಮುಂದೆ ನೆರವಿಗಾಗಿ ಅಂಗಲಾಚುತ್ತಿದ್ದಾರೆ.. ಹನಿ ಗೂಡಿ ಹಳ್ಳ ಎಂಬಂತೆ ನಿಮ್ಮೆಲ್ಲರ ಸಣ್ಣ ಮೊತ್ತವು ಕೂಡ ಶೋಭಾ ಪೂಜಾರಿಯವರಿಗೆ ಆಸರೆಯಾಗಬಹುದು. ನೆರವು ನೀಡುವವರು ಶೋಭಾ ಪೂಜಾರಿ ಪತಿ ರಮೇಶ್ ಪೂಜಾರಿ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು..
ಬ್ಯಾಂಕ್ ಅಕೌಂಟ್ ಡಿಟೈಲ್ ಮಾಹಿತಿ.. Name. Ramesh Poojari, Ac/no.110263404924, Ifsc.CNRB0010125, Branch. Kaup., Contact :9591485241..

