ಬೆಳಗಾವಿ ಸುವರ್ಣಸೌಧ: ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಮಂಗಳೂರು ಪ್ರಾದೇಶಿಕ ಕಚೇರಿ ಕುರಿತು ಐವನ್ ಡಿ’ಸೋಜಾ ಪ್ರಶ್ನೆ

0
23

ದಿನಾಂಕ16/12/2025 ರಂದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ತಿನ ಕಲಾಪದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ ರವರು, ರಾಜೀವ್‌ ಗಾಂಧಿ ವಿಶ್ವವಿದ್ಯಾನಿಲಯ ಮೈಸೂರು ವಿಭಾಗದ ಪ್ರಾದೇಶಿಕ ಕಛೇರಿ ಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಯೋಜನೆ ಯಾವ ಹಂತದಲ್ಲಿದೆ ? ಇದರ ಕಾರ್ಯ ಪ್ರಾರಂಭಿಸಲಾಗಿದೆಯೇ? ಎಂಬ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರ ಉತ್ತರ.

ಮಂಗಳೂರಿನಲ್ಲಿ ರಾಜೀವ್‌ ಗಾಂಧಿ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಛೆರಿ ಕಟ್ಟಡ ನಿರ್ಮಾಣದ ಕಾಮಗಾರಿಯು ದಿನಾಂಕ:17-01-2025ರಿಂದ ಪ್ರಾರಂಭಗೊಂಡಿರುತ್ತದೆ. ಬೇಸ್‌ಮೆಂಟ್‌ ಹಾಗೂ ನೆಲಮಹಡಿಯಲ್ಲಿನ ಎಲ್ಲಾ ರೀತಿಯ ಕಾಂಕ್ರೀಟ್‌ ಕೆಲಸ ಪೂರ್ಣಗೊಂಡಿದ್ದು, ಮೊದಲನೇ ಮಹಡಿಯ ಕೆಲಸಗಳು ಪ್ರಗತಿಯಲ್ಲಿರುತ್ತದೆ.

ಸದ್ರಿ ಪ್ರಾದೇಶಿಕ ಕಛೇರಿ ಕಟ್ಟಡ ಕಾಮಗಾರಿಯನ್ನು ಡಿಸೆಂಬರ್-‌2026 ರ ಅಂತ್ಯಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಪ್ರಗತಿಯಲ್ಲಿರುವ ಕಾಮಗಾರಿಯ ಕೆಲಸಗಳು ಮತ್ತು ಒಳಾಂಗಣ ಕೆಲಸಗಳು (Interior Works) ಪೂರ್ಣಗೊಂಡ ನಂತರದಲ್ಲಿ ಕಛೇರಿಯನ್ನು  ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಎಂದು ಸಚಿವರು ಉತ್ತರಿಸಿದ್ದಾರೆ.

LEAVE A REPLY

Please enter your comment!
Please enter your name here