ಬಳ್ಳಾರಿ : ದಿನಾಂಕ 1.11.2025ರ ಭಾನುವಾರ ರಂದು. ಬಳ್ಳಾರಿಯ ಹವ್ಯಾಸಿ ಗಾಯಕಿಯಾಗಿರುವ ಗೀತಾ ಸಾಗರ್ ಹಾಗೂ ಹವ್ಯಾಸಿ ಗಾಯಕರೆಲ್ಲ ಸೇರಿಕೊಂಡು 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ.. ಬಳ್ಳಾರಿ ಸಿಂಗಿಂಗ್ ಕ್ಲಬ್ ಕರೋಕೆ ಸ್ಟುಡಿಯೋ ರಾಕ್ ವಿಲ್ಲೇ. ಬಳ್ಳಾರಿ ಮೋತಿ ಸರ್ಕಲ್ ನಲ್ಲಿ ಆಯೋಜಿಸಿದ್ದ ವಿಶೇಷ ಸಂಗೀತ ರಸಮಂಜರಿ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ. ಬಳ್ಳಾರಿಯ ಹಿರಿಯ ರಂಗಭೂಮಿ ಕಲಾವಿದೆಯಾಗಿರುವ ಮನ್ಸೂರ್ ಸುಭದ್ರಮ್ಮ ನವರ ಮೊಮ್ಮಗಳಾಗಿರುವ ಕಲ್ಯಾಣಿ ಸಂಗೀತ ಶಿಕ್ಷಕಿ ಇವರು ಉದ್ಘಾಟಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ಸಿಂಗಿಂಗ್ ಕ್ಲಬ್ ನ ಸಂಸ್ಥಾಪಕರಾಗಿರುವ ಶ್ರೀಕಾಂತ್ ಬಾಬು ಅವರು ವಹಿಸಿದ್ದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ. ಹಿರಿಯ ಗಾಯಕರಾದ ಹನುಮಂತಪ್ಪ . ಮಾರ್ಕಂಡೇಯ. ಬಳ್ಳಾರಿಯ ಮಿಮಿಕ್ರಿ ಕಲಾವಿದರಾದ ಕಾಳಿದಾಸ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಪ್ರಾರಂಭಿಸಿದರು.ಗಾಯಕಿ ಇಂದಿರಾ ಟಿ ಎ.ಅವರು ಅತಿಥಿಗಳನ್ನ ಸ್ವಾಗತಿಸಿದರು . ಉದ್ಘಾಟಕರ ನುಡಿಯಲ್ಲಿ ಕಲ್ಯಾಣಿ ಅವರು ಮಾತನಾಡಿ ಕನ್ನಡ ರಾಜ್ಯೋತ್ಸವ ದಂದು ಕನ್ನಡ ಗೀತೆಗಳನ್ನು ಹಾಡುವುದು ದರೋಂದಿಗೆ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿ ಪಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಗೀತಾ ಸಾಗರ್ ಅವರು ನಿರೂಪಿಸಿದರು. ಗಾಯಕಿಯರಾಗಿ.ಮಮತಾ ಮೂರ್ತಿ, ವನಜಾಕ್ಷಿ, ವೀಣಾ ಪ್ರಣವ್, ಸೌಭಾಗ್ಯ ಆಳ್ವಿ, ಮಧುಮತಿ, ಇಂದಿರಾ .ಟಿ.ಎ..ಕುಮಾರಿ ನಯನ, ಗಾಯಕರಾಗಿ ಕರಿಯಪ್ಪ ತುಳಸಿದಾಸ್ ಎನ್ ಆರ್. ಸಿ ಮಾರ್ಕಂಡೇಯ, ಹನುಮಂತಪ್ಪ, ಶೇಖರ್ ಗೌಡ್ರು, ಮಂಜುನಾಥ್ ಹಿರೇಮಠ್, ಅದ್ಭುಲ್ ರೌಫ್, ಚಂದ್ರಶೇಖರ್, ಡಿಜಿ ತಿರುಮಲ, ನಾಗರಾಜ್, ನವೀನ್ ಕಮ್ಮಾರ್, ಗಾಯಕರು ಅದ್ಭುತ ಕನ್ನಡ ಗೀತೆಗಳು ಧ್ವನಿಯಾದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಗಾಯಕರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

