ಬೆಳ್ಮಣ್: ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಬೆಳ್ಮಣ್ ಇದರ ಪ್ರಥಮ ವಾರ್ಷಿಕ ಮಹಾಸಭೆಯು ಆ. 31ರಂದು ಕುಲಾಲ ಸಭಾಭವನ, ನಾನಿಲ್ತಾರ್ ಮುಲ್ಲಡ್ಕದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷರಾದ ಕುಶ ಆರ್. ಮೂಲ್ಯ ಇನ್ನಾ ಅವರು ಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಆಡಳಿತ ಮಂಡಳಿ ಉಪಾಧ್ಯಕ್ಷರು, ನಿರ್ದೇಶಕರುಗಳು ಶ್ರಮಿಸುತ್ತಿದ್ದಾರೆ. ಸಿಬ್ಬಂದಿ ವರ್ಗದವರ ಸಹಕಾರವೂ ಬಹಳಷ್ಟಿದೆ ಎಂದ ಅವರು ಸೊಸೈಟಿಯ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರವನ್ನು ಕೋರಿದರು. ಸ್ವಸಹಾಯ ಗುಂಪು ರಚನೆ ಮತ್ತು ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಜಗನ್ನಾಥ ಮೂಲ್ಯ ಬೆಳ್ಮಣ್ , ನಿರ್ದೇಶಕರುಗಳಾದ ಜಯರಾಮ್ ಕುಲಾಲ್, ಬೊಗ್ಗು ಮೂಲ್ಯ ಬೇಲಾಡಿ, ಶಂಕರ್ ಮೂಲ್ಯ ಇನ್ನಾ, ಗೋಪಾಲ ಮೂಲ್ಯ ಮುಲ್ಲಡ್ಕ, ಗಣೇಶ್ ಮೂಲ್ಯ, ಬೋಳ ರಾಜೇಶ್ ಕುಲಾಲ್, ಸಂತೂರ್ ದೀಪಕ್ ಕುಲಾಲ್ ಬೆಳ್ಮಣ್, ಸುರೇಶ್ ಮೂಲ್ಯ, ನಂದಳಿಕೆ ಸುಗಂಧಿ ಮೂಲ್ಯ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯರು ಹಾಗೂ ಪಿಗ್ಮಿ ಏಜೆಂಟ್‌ಗಳಿಗೆ ಪುಷ್ಪ ನೀಡುವ ಮೂಲಕ ಗೌರವಿಸಲಾಯಿತು.
ಸೊಸೈಟಿಯ ನಿರ್ದೇಶಕರಾದ ರಮಾನಂದ ಮೂಲ್ಯ ಸ್ವಾಗತಿಸಿದರು. ಮಹಾಸಭೆಯ ನೋಟಿಸ್ ಓದಿ ಧೃಡೀಕರಿಸಲಾಯಿತು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದ್ದು, ಸಭೆಯು ಅದನ್ನು ಅಂಗೀಕರಿಸಿತು. ವರದಿಯಲ್ಲಿ ಕಂಡುಬಂದ ನೂನ್ಯತೆಗಳಿಗೆ ಅನುಪಾಲನಾ ವರದಿ ವರದಿಯ ಬಗ್ಗೆ ಕ್ರಮ ಕೈಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಮಂಡಿಸಿ ಮಂಜೂರು ಮಾಡಲಾಯಿತು. ೨೦೨೫-೨೬ನೇ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಬೈಲಾ ತಿದ್ದುಪಡಿಗಳು ಸಭೆಯಲ್ಲಿ ಮಂಡಿಸಿ ಅಂಗೀಕರಿಸಲ್ಪಟ್ಟವು. ಸೊಸೈಟಿಯ ನಿರ್ದೇಶಕಿ ಪ್ರತಿಮಾ ಶ್ರೀಧರ್ ಇನ್ನಾ ವಂದಿಸಿದರು. ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬ್ರಿಜೇಶ್ ಕುಲಾಲ್ ನಿರ್ವಹಿಸಿದರು ಸುಶ್ಮಿತಾ ಹರೀಶ್ ಸಂಕಲಕರಿಯ ಹಾಗೂ ಆಶಾ ವರದಾರಾಜ್ ಸಹಕರಿಸಿದರು.