ಬೆಳ್ತಂಗಡಿ : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ‌ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾಗಿ ರಂಜನ್ ಕುಮಾರ್ ನೆರಿಯ ಆಯ್ಕೆ

0
7

ಬೆಳ್ತಂಗಡಿ : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ‌ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾಗಿ ರಂಜನ್ ಕುಮಾರ್ ನೆರಿಯ ಆಯ್ಕೆಯಾಗಿದ್ದಾರೆ.

ಆಮಂತ್ರಣ ಪರಿವಾರದ ಸಹ ಸಂಸ್ಥೆಯಾಗಿ ಇಡೀ ದ.ಕ ಉಡುಪಿ ಚಿಕ್ಕಮಗಳೂರು ಜಿಲ್ಲಾ ವೇದಿಕೆಗಳನ್ನು ಹೊಂದಿದ್ದು ಆಯಾ ಜಿಲ್ಲೆಗೆ ಸಂಘಟನೆಯ ದೃಷ್ಟಿಯಲ್ಲಿ‌ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತಿದೆ.
ಅಂತೆಯೇ ದ.ಕ ಜಿಲ್ಲಾ ಪದಗ್ರಹಣ ಮಾ.1 ರಂದು ಬಂಟ್ವಾಳದಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾಗಿ ಉತ್ಸಾಹಿ ಹಾಗೂ ಸಂಘಟಕ ಪೋಟೋಗ್ರಾಫರ್ ರಂಜನ್ ಕುಮಾರ್ ಇವರನ್ನು ಆಯ್ಕೆ ಮಾಡಲಾಗಿದೆ.

ಈ ಆಯ್ಕೆಯಲ್ಲಿ ರಾಜ್ಯ ಪ್ರತಿನಿಧಿಗಳಾದ ಹೆಚ್.ಕೆ.ನಯನಾಡು,ಆಶಾ ಅಡೂರು, ಉಮಾ ಹಾಸನ,ಭಾರತಿ ಪರ್ಕಳ ಮತ್ತು ದ.ಕ ಜಿಲ್ಲಾಧ್ಯಕ್ಷೆ ವಿಂಧ್ಯಾ ಎಸ್.ರೈ , ಉಪಾಧ್ಯಕ್ಷೆ ಅನಿತಾ ಶೆಟ್ಟಿ ಸಹಕರಿಸಿದ್ದಾರೆ ಎಂದು
ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here