ಬೆಳ್ತಂಗಡಿ: ಷಣ್ಮುಖ ಗೌಡ ಇವರ ಕಿಡ್ನಿ ಸಮಸ್ಯೆಗೆ ಆರ್ಥಿಕವಾಗಿ ಸಹಾಯ ಮಾಡಿ ಧೈರ್ಯ ತುಂಬಿದ ಕಿರಣ್ ಚಂದ್ರ ಡಿ. ಪುಷ್ಪಗಿರಿ

0
6

ಬೆಳ್ತಂಗಡಿ: ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲದ ನಿವಾಸಿ ಷಣ್ಮುಖ ಗೌಡ ಇವರು ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ. ತೀರ ಇತ್ತೀಚೆಗೆ ಯಾವುದೇ ಮುನ್ಸೂಚನೆಯಿಲ್ಲದೆ ಅವರ ಎರಡೂ ಕಿಡ್ನಿಗಳು ಏಕಾಏಕಿಯಾಗಿ ಘಾಸಿಗೊಂಡಿವೆ. ಮನೆಯಲ್ಲಿ ಎರಡು ಚಿಕ್ಕ ಮಕ್ಕಳು ಇದ್ದು, ಒಂದು ಮಗು ಇನ್ನೂ ಹಸುಳೆ. ಸಣ್ಣ ಮಗುವಿನ ಜತೆ, ಮಗುವಿನ ತಾಯಿ ಪಡುತ್ತಿರುವ ನೋವನ್ನು ಗಮನಿಸಿ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅಕ್ಷರಶ: ಮೂಕರಾದ ಘಟನೆ ನಡೆದಿದೆ.
ಕಳೆದ ಭಾನುವಾರ ಈ ದಂಪತಿಗಳು ಸಣ್ಣ ಮಕ್ಕಳ ಸಮೇತ ಕಿರಣ್ ಚಂದ್ರ ಡಿ.ಪುಷ್ಪಗಿರಿಯವರನ್ನು ಭೇಟಿಯಾಗಲು ಬೆಳ್ಳoಬೆಳಿಗ್ಗೆ ಗುರುವಾಯನಕೆರೆ ಗೇರುಕಟ್ಟೆ ಸಮೀಪದ ಪುಷ್ಪಗಿರಿ ನಿವಾಸಕ್ಕೆ ಬಂದಿತ್ತು. ಸುಮಾರು 55 ಕಿಲೋಮೀಟರ್ ದೂರದಿಂದ ಬಾಡಿಗೆ ರಿಕ್ಷಾ ಹಿಡಿದು ಬಂದಿದ್ದ ದಂಪತಿಯ ನೋವಿಗೆ ಕಿರಣ್ ಚಂದ್ರ ಕಣ್ಣೀರಾಗಿದ್ದಾರೆ. ತಕ್ಷಣ ಅವರಿಗೆ ಧೈರ್ಯ ತುಂಬಿ, ಸಹಾಯಕ್ಕೆ ಧಾವಿಸಿದ್ದು, ಆರ್ಥಿಕ ಸಹಾಯ ನೀಡಿದ್ದಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಚಿಕಿತ್ಸೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸಲು ತಮ್ಮ ತಂಡಕ್ಕೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here