ಬೆಳ್ತಂಗಡಿ: ಭಾರೀ ಮಳೆಗೆ ಬೆಳ್ತಂಗಡಿಯಲ್ಲೊಂದು ಬಲಿಯಾಗಿದೆ. ಓಡಿಲ್ನಾಳ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಹಾಯಕ ಪವರ್ ಮ್ಯಾನ್ ಮೃತಪಟ್ಟಿದ್ದಾರೆ.
ರೇಷ್ಮೆ ರೋಡ್ ನಿವಾಸಿ ವಿಜೇಶ್(32) ಮೃತ ವ್ಯಕ್ತಿ. ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿ ಹೋಗಿದ್ದು, ಬೆಳ್ತಂಗಡಿ ತಾಲೂಕಿನಲ್ಲೂ ಮಳೆಯ ಅಬ್ಬರ ಜೋರಾಗಿದೆ. ವಿದ್ಯುತ್ ಕೈಕೊಡುತ್ತಿದ್ದು, ಜೀವದ ಹಂಗು ತೊರೆದು ಮೆಸ್ಕಾ ಅಧಿಕಾರಿಗಳು ಕೆಲಸ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಈ ನಡುವೆ ಒಬ್ಬ ಲೈನ್ ಮ್ಯಾನ್ ಪ್ರಾಣ ಕಳೆದುಕೊಂಡಿದ್ದಾರೆ.