
ದಾವಣಗೆರೆ : ಎಸ್.ಎಸ್.ಎಲ್.ಸಿ. ಹಂತ ಮಕ್ಕಳ ಜೀವನದ ಒಂದು ತಿರುವು ಉತ್ತಮ ಫಲಿತಾಂಶ ಬಂದರೆ ವಿದ್ಯಾರ್ಥಿಗಳ ಮುಂದಿನ ಜೀವನದ ದಿವ್ಯ ಭವ್ಯ ಭವಿಷ್ಯಕ್ಕೆ ನಾಂದಿ. 2025-26ನೇ ಸಾಲಿನ ಮಾರ್ಚ್ 18 ರಿಂದ ಪರೀಕ್ಷೆ ಪ್ರಾರಂಭವಾಗುತ್ತಿದ್ದು ಏಪ್ರಿಲ್ 2ಕ್ಕೆ ಮುಗಿಯುತ್ತದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕಲಾಕುಂಚ ವಿವಿಧ ಬಡಾವಣೆ ಶಾಖೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರು ಶುಭ ಹಾರೈಸಿದ್ದಾರೆ ಎಂದು ಕಲಾಕುಂಚ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ತಿಳಿಸಿದ್ದಾರೆ.
ಮಕ್ಕಳು ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ಪೂರ್ವ ಸಿದ್ಧತೆಯೊಂದಿಗೆ ಭಯ ಪಡದೇ ಕಷ್ಟ ಪಡದೇ ಇಷ್ಟದೊಂದಿಗೆ ಪರೀಕ್ಷೆ ಎದುರಿಸಿ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಪರಿಪೂರ್ಣ ಅಂಕಪಡೆದರೆ ಕಲಾಕುಂಚದಿAದ “ಕನ್ನಡ ಕೌಸ್ತುಭ” ರಾಜ್ಯ ಪ್ರಶಸ್ತಿ, 625ಕ್ಕೆ 600ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿ, ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 120ರಿಂದ 124ರವರೆಗೆ ಅಂಕ ಪಡೆದ ಮಕ್ಕಳಿಗೆ ದಾವಣಗೆರೆ ಜಿಲ್ಲಾ ಮಟ್ಟದಲ್ಲಿ “ಕನ್ನಡ-ಕುವರ-ಕುವರಿ‘’ ಜಿಲ್ಲಾ ಪ್ರಶಸ್ತಿಗಳನ್ನು ವೈಭವಪೂರ್ಣ ವಿಜೃಂಭಣೆಯಿಂದ ಸನ್ಮಾನ ಮಾಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ಪ್ರಕಟಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿದ ಮೇಲೆ ಫಲಿತಾಂಶ ಬಂದ ನಂತರ ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು.
ಉತ್ತಮ ಫಲಿತಾಂಶ ಬಂದರೆ ಅಕ್ಷರಾಭ್ಯಾಸ ನೀಡಿದ ಗುರುಗಳಿಗೆ, ಹೆತ್ತ ತಂದೆ-ತಾಯಿಗಳಿಗೆ, ಓದಿದ ಶಾಲೆಗೆ, ಹುಟ್ಟಿದ ಊರಿಗೆ ಒಳ್ಳೆಯ ಹೆಸರು ತರಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.
