ಶೂ ಒಳಗೆ, ಮನೆ ಎದುರು ಕೀ ಮುಚ್ಚಿಡುವವರೇ ಹುಷಾರ್ ! ಫ್ಲ್ಯಾಟ್‌ಗಳಿಂದ ಲಕ್ಷಾಂತರ ರೂ. ಕಳ್ಳತನ

0
125

ಬೆಂಗಳೂರು: ಅಕ್ಕನ ಮನೆಯಲ್ಲಿದ್ದುಕೊಂಡು ಅಕ್ಕಪಕ್ಕದ ಫ್ಲ್ಯಾಟ್‌ಗಳಲ್ಲಿ ಕಳ್ಳತನ ಮಾಡಿ, 65 ಲಕ್ಷ ರೂ. ಕನ್ನ ಹಾಕಿದ್ದವನನ್ನು ಹೆಬ್ಬಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ನಿತೇಶ್ ಸುಬ್ಬು ಬಂಧಿತ ಆರೋಪಿ. ಇತ್ತೀಚಿಗೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ಮೇಲಿಂದ ಮೇಲೆ ಕಳ್ಳತನ ಕೇಸ್‌ಗಳು ವರದಿಯಾಗುತ್ತಿದ್ದವು. ಹೀಗಾಗಿ ಫೀಲ್ಡ್‌ಗಿಳಿದ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದರು

ಆರೋಪಿ ಅಕ್ಕನ ಫ್ಲ್ಯಾಟ್‌ನಲ್ಲಿ ಉಳಿದುಕೊಂಡಿದ್ದ. ಯಾರು ಇಲ್ಲದಿದ್ದಾಗ ಅಕ್ಕಪಕ್ಕದ ಫ್ಲ್ಯಾಟ್‌ಗಳ ಬೆಲ್ ಮಾಡಿ ಓಡಿ ಹೋಗ್ತಿದ್ದ. ಒಂದು ವೇಳೆ ಬೆಲ್ ಮಾಡಿದಾಗ ಮನೆಗಳ ಬಾಗಿಲು ಓಪನ್ ಮಾಡಿದರೆ ಸೇಫ್. ಫ್ಲ್ಯಾಟ್‌ಗಳ ಡೋರ್ ಓಪನ್ ಮಾಡದೇ ಇದ್ದರೆ ಕಳ್ಳತನ ಮಾಡುತ್ತಿದ್ದ.

LEAVE A REPLY

Please enter your comment!
Please enter your name here