ಭದ್ರಗಿರಿ : ಕಾರ್ತೀಕ ಏಕಾದಶಿ ಅಖಂಡ ಭಜನಾ ಮಹೋತ್ಸವ ಮತ್ತು ಕಾರ್ತೀಕ ದೀಪೋತ್ಸವ

0
90

ದಕ್ಷಿಣ ಪಂಢರಪುರ ಖ್ಯಾತಿಯ ಭದ್ರಗಿರಿ  ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಕಾರ್ತೀಕ ಏಕಾದಶಿಯ  ಅಖಂಡ ಭಜನಾ ಏಕಾಹ ಮಹೋತ್ಸವ ಮತ್ತು ದೀಪೋತ್ಸವ ವು 02.11.2025 ರ ಆದಿತ್ಯವಾರ  ಬೆಳಿಗ್ಗೆ  8.00 ಕ್ಕೆ ಶ್ರೀ ದೇವತಾ ಪ್ರಾರ್ಥನೆ ಮತ್ತು ದೀಪ ಪ್ರಜ್ವಲನದಿಂದ ಪ್ರಾರಂಭವಾಯಿತು .

ಈ ಸಂದರ್ಭದಲ್ಲಿ ಆಡಳಿತೆ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ, ಗೌರಾವಾಧ್ಯಕ್ಷ ನಾಗರಮಠ ಮಂಜುನಾಥ ನಾಯಕ್ ,ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ  ಸದಸ್ಯರು , ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ ಭಟ್ ಮತ್ತು ಅರ್ಚಕರಾದ ಸದಾನಂದ ಆಚಾರ್ಯ, ಕೃಷ್ಣಾನಂದ ಶರ್ಮ  ಮತ್ತು ಭಜಕರು ಉಪಸ್ಥಿತರಿದ್ದರು . ಈ ಅಖಂಡ ಭಜನಾ ಮಹೋತ್ಸವದಲ್ಲಿ ಊರ ಪರ ಊರಿನ  14  ಭಜನಾ ಮಂಡಳಿಗಳು ಪಾಲ್ಗೊಂಡು  ಭಜನಾ ಸೇವೆ ಸಲ್ಲಿಸಿದವು.   ರಾತ್ರಿ ದೀಪೋತ್ಸವ ಹಾಗೂ ಪ್ರಸನ್ನಪೂಜೆಯಿಂದ  ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು .

LEAVE A REPLY

Please enter your comment!
Please enter your name here