ಭರತನಾಟ್ಯ ಜೂನಿಯರ್ ಪರೀಕ್ಷೆ: ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದ ಪ್ರತೀಕ್ಷಾ ಶೆಟ್ಟಿ

0
153

ಮಂಗಳೂರು: ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ವತಿಯಿಂದ ಕಳೆದ ಮೇ ತಿಂಗಳಲ್ಲಿ ನಡೆದಿರುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ನೃತ್ಯಂಜಲಿ ನಾಟ್ಯ ಶಾಲೆಯ ವಿದುಷಿ ವಿನುತ ಪ್ರವೀಣ್ ಗಟ್ಟಿಯ ಶಿಷ್ಯಯಾದ ಪ್ರತೀಕ್ಷ ಶೆಟ್ಟಿಯವರು 400 ರಲ್ಲಿ 395 ಅಂಕ ಪಡೆದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಹಾಗೂ ರಾಜ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ.

ಇವರು ಬಸ್ತಿಕೋಡಿ ನಿವಾಸಿ ಹರಿಶ್ಚಂದ್ರ ಶೆಟ್ಟಿ ಮತ್ತು ಶಕುಂತಲಾ ದಂಪತಿಯ ಪುತ್ರಿ. ಇವರು ಚೆನ್ನೈ ತೋಡಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಹಾಗೂ ಬಸ್ತಿ ಕೋಡಿ ನೃತ್ಯಂಜಲಿ ನಾಟ್ಯಶಾಲೆಯ ವಿದ್ಯಾರ್ಥಿ ಆಗಿದ್ದಾರೆ.

LEAVE A REPLY

Please enter your comment!
Please enter your name here