ಭರತನಾಟ್ಯ ಜೂನಿಯರ್‌ ಪರೀಕ್ಷೆ: ಅಂಡಿಂಜೆಯ ಸಂಪ್ರಿತಾ ಜೈನ್‌ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

0
150

ವೇಣೂರು: ಮೈಸೂರಿನ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಇತ್ತೀಚೆಗೆ ನಡೆಸಿದ ಭರತನಾಟ್ಯ ಜೂನಿಯರ್‌ ಪರೀಕ್ಷೆಯಲ್ಲಿ ವೇಣೂರು ದೇವಿಕಿರಣ್‌ ಕಲಾನಿಕೇತನದ ವಿದ್ಯಾರ್ಥಿನಿ ಸಂಪ್ರಿತಾ ಜೈನ್‌ ಶೇ. 86 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.

ಈಕೆ ದೇವಿಕಿರಣ್‌ ಕಲಾನಿಕೇತನ ವೇಣೂರು ಇಲ್ಲಿನ ನೃತ್ಯ ಗುರು ವಿದುಷಿ ಶ್ರೀಮತಿ ಸ್ವಾತಿ ಜಯರಾಮ್‌ ಮತ್ತು ವಿದುಷಿ ಪೃಥ್ವಿ ಸತೀಶ್‌ ಇವರ ಶಿಷ್ಯೆ. ವೇಣೂರು ನವಚೇತನ ಆಂಗ್ಲಮಾಧ್ಯಮ ಶಾಲೆಯಲ್ಲಿ ೮ನೇ ತರಗತಿ ಓದುತ್ತಿರುವ ಈಕೆ ಪ್ರಸ್ತುತ ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸ‍ಂಘದ ನಿರ್ದೇಶಕರಾದ ಅಂಡಿಂಜೆ ಎಂ.ಆರ್.‌ ಸಂತೋಷ್‌ ಜೈನ್‌ ಮತ್ತು ಪ್ರತಿಮಾ ಜೈನ್‌ ದಂಪತಿಯ ಪುತ್ರಿ

LEAVE A REPLY

Please enter your comment!
Please enter your name here