ವೇಣೂರು ಕುಂಭಶ್ರೀ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಭರತನಾಟ್ಯ ತರಬೇತಿ

0
23

ವೇಣೂರು: ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜು ನಿಟ್ಟಡೆ ಇಲ್ಲಿ ನಿರಂತರ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿದೆ.

ಪ್ರತಿ ಶುಕ್ರವಾರ , ಯೋಗ , ಸಂಗೀತ ಯಕ್ಷಗಾನ, ಕರಾಟೆ, ಡ್ಯಾನ್ಸ್ ತರಗತಿಗಳು ಪ್ರಾರಂಭಗೊಂಡಿದ್ದು , ಇದರ ಜೊತೆಗೆ ವಿದುಷಿ ನಿಶಾ ಪ್ರಸಾದ್ ಇವರು ಭರತನಾಟ್ಯ ತರಗತಿಯನ್ನು ಪ್ರಾರಂಭಿಸುತ್ತಿದ್ದಾರೆ. ದಿನಾಂಕ 08-07-2025 ರಂದು ಜ್ಞಾನವಾಹಿನಿ ತಂಡದವರಾದ ರಾಧಿಕಾ ಶೆಟ್ಟಿ ಮತ್ತು ವಿದುಷಿ ನಿಶಾ ಪ್ರಸಾದ್ ಬಳಗದವರಿಂದ 8 ಪ್ರಕಾರಗಳಲ್ಲಿ ಭರತನಾಟ್ಯ ನೃತ್ಯ ಮತ್ತು ಭರತನಾಟ್ಯ ಮುದ್ರೆಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಅಶ್ವಿತ್ ಕುಲಾಲ್ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here