ಉಡುಪಿ: ವಿದುಷಿ ದೀಕ್ಷಾ ವಿ. ಅವರು ಪ್ರಸ್ತುತಪಡಿಸುತ್ತಿರುವ ಭರತನಾಟ್ಯ ನವರಸ ದೀಕ್ಷಾ ವೈಭವಂ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆಯತ್ತ ಸಾಗುತ್ತಿದೆ. 171 ಗಂಟೆಗಳಿಂದ ಸತತ ಕಾರ್ಯಕ್ರಮ ನೀಡಿದ್ದು, ಇದೀಗ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮುನ್ನಡೆಯಾಗಿ ವಿಜಯದ ಸಂಕೇತವಾಗಿದೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಡಾಕ್ಟರ್ ಜಿ ಶಂಕರ್ ಮಹಿಳಾ ಕಾಲೇಜು ಉಡುಪಿ ಇಲ್ಲಿ ಆಯೋಜನೆ ಮಾಡಲಾಗಿರುವ ಈ ದಾಖಲೆಯ ಕಾರ್ಯಕ್ರಮದಲ್ಲಿ ಒಟ್ಟು 216 ಗಂಟೆ ಅಂದರೆ 9 ದಿನಗಳ ನಿರಂತರ ಕಾರ್ಯಕ್ರಮದ ಗುರಿ ಹೊಂದಲಾಗಿದೆ. ನಿರಂತರ ಭರತನಾಟ್ಯ ಪ್ರದರ್ಶನ ಇದಾಗಿದ್ದು ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸುತ್ತಿದ್ದಾರೆ. ನವ ದೀಕ್ಷಾ ವೈಭವ ಎಂಬ ನಾಮಕರಣದಿಂದ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗುತ್ತಿದ್ದು ವಿದುಷಿ ದೀಕ್ಷಾ ಇವರು ಕಳೆದ 20 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು ಇವರಗುರು ಶ್ರೀಧರ್ ರಾವ್ ಬನ್ನಂಜೆ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದರು. ಜೊತೆಗೆ ಯಕ್ಷಗಾನ,ಶಾಸ್ತ್ರೀಯ ಸಂಗೀತ, ವೀಣೆ, ಮದ್ದಳೆ, ಚಿತ್ರಕಲೆ, ಅಭ್ಯಾಸ ಮಾಡಿದ್ದು ಬಿ .ಎಡ್ ಪದವೀಧರಾಗಿದ್ದು, ವಿಶ್ವ ದಾಖಲೆಯತ್ತ ದಾಪುಗಾಲು ನಮಗೆ ಮತ್ತು ನಮ್ಮ ಕುಟುಂಬಕ್ಕೆ ಹೆಮ್ಮೆ ಹಾಗೂ ಸಂತಸ ತಂದಿದೆ ಎಂದು ಇವರ ಪತಿ ರಾಹುಲ್ ನಮ್ಮ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ವರದಿ: ಮಂದಾರ ರಾಜೇಶ್ ಭಟ್