ಭಾರತೀಯ ವಿದ್ಯಾ ಗ್ರಂಥಾಲಯ ಲೋಕಾರ್ಪಣೆ

0
38


ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ವಿದ್ಯಾ ಭಾರತೀಯ ಗ್ರಂಥಾಲಯ ಅತೀ ಶೀಘ್ರದಲ್ಲೆ ಲೋಕಾರ್ಪಣೆಯಾಗಲಿದೆ ಎಂದು ಗ್ರಂಥಾಲಯ ಮುಖ್ಯಸ್ಥರಾದ ಶ್ರೀಮತಿ ಅರ್ಚನಾ ಮಠದ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಲೇಖಕರು, ಕವಿ, ಕವಯತ್ರಿಯರು ಮೊದಲೇ ಪುಸ್ತಕಗಳನ್ನು ಕೊಟ್ಟರೇ ಅದೇ ಸಮಾರಂಭದಲ್ಲಿ ಉಚಿತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಾಹಿತಿಗಳಾದ ಬಸವರಾಜ್ ಎಸ್.ಬಿ. ಪ್ರಕಟಿಸಿದ್ದಾರೆ.
ಈ ಗ್ರಂಥಾಲಯಕ್ಕೆ ಪುಸ್ತಕ ದಾನಿಗಳು ಕೊಡಲು ಹಾಗೂ ಪುಸ್ತಕ, ಕವನ ಸಂಕಲನ ಲೋಕಾರ್ಪಣೆಗೆ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸುವ ವಾಟ್ಸಪ್ ನಂ: 9731081444, 9538732777.

LEAVE A REPLY

Please enter your comment!
Please enter your name here