ಮೂಡುಬಿದಿರೆಯಲ್ಲಿ ಯುದ್ಧ ಸ್ಮಾರಕ ಜನವರಿ 30 ರಂದು ಭೂಮಿ ಪೂಜೆ

0
57

ವರದಿ ರಾಯಿ ರಾಜ ಕುಮಾರ.

ಮೂಡುಬಿದಿರೆ ಮತ್ತು ಕಾರ್ಕಳ ತಾಲೂಕುಗಳನ್ನು ಒಳಗೊಂಡ ಮಾಜಿ ಸೈನಿಕರ ವೇದಿಕೆ ಕಳೆದ ಹತ್ತು ವರ್ಷಗಳಿಂದ ಪ್ರಯತ್ನಿಸಿದ ಫಲವಾಗಿ ಮೂಡುಬಿದಿರೆ ತಾಲೂಕು ಮಾರ್ಪಾಡಿ ಗ್ರಾಮದ ಸರ್ವೆ ನಂಬ‌ರ್ 259/1ರಲ್ಲಿ 16 ಸೆಂಟ್ಸ್ ಜಮೀನು ಸರಕಾರದಿಂದ ಮಂಜೂರ್ ಆಗಿರುತ್ತದೆ ಎಂದು ವೇದಿಕೆಯ ಅಧ್ಯಕ್ಷ ವಿಜಯ ಫೆರ್ನಾಂಡಿಸ್‌ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮಂಜೂರಾದ ಜಮೀನಿನಲ್ಲಿ ಸುಂದರವಾದ ಯುದ್ಧ ಸ್ಮಾರಕದ ಜೊತೆಗೆ ಸೈನ್ಯಕ್ಕೆ ಸೇರಲು ಬಯಸುವ ಯುವಕರಿಗೆ ಪ್ರೇರಣೆಯನ್ನು ನೀಡುವುದಕ್ಕೆ ಬೇಕಾದ ಶಿಬಿರವನ್ನು ಏರ್ಪಡಿಸಲು ಚಿಕ್ಕ ಹಾಲನ್ನು ನಿರ್ಮಿಸಲಾಗುವುದು. ಯುದ್ಧ ಸ್ಮಾರಕದ ಕರಡು ಪ್ರತಿ ತಯಾರಿಸಲಾಗಿದ್ದು ಜನವರಿ 30 ರಂದು ಸ್ಥಳೀಯ ಹಾಗೂ ಕಾರ್ಕಳದ ಗಣ್ಯರ ಸಮ್ಮುಖದಲ್ಲಿ ಭೂಮಿ ಪೂಜೆ ನಡೆಯಲಿದೆ. ಮೂಡುಬಿದಿರೆ ಪರಿಸರದ ದೇಶಪ್ರೇಮಿಗಳು, ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಂದರವಾದ ಸ್ಮಾರಕ ಮೂಡಿ ಬರುವಂತೆ ಸಹಕರಿಸಬೇಕೆಂದು ಮಾಜಿ ಸೈನಿಕರ ವೇದಿಕೆ ಅಪೇಕ್ಷಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಭಾಸ್ಕರ್, ಕೋಶಾಾಧಿಕಾರಿ ವಾಸುದೇವ ಶೇರಿಗಾ‌ರ್, ಸ್ಥಾಪಕ ಅಧ್ಯಕ್ಷ ರಾಮಚಂದ್ರ ನಾಯಕ್, ಸ್ಥಾಪಕ ಸದಸ್ಯ ಸದಾಶಿವ ಶೆಟ್ಟಿ, ಹಾಜರಿದ್ದರು.

LEAVE A REPLY

Please enter your comment!
Please enter your name here