ಮೂಡುಬಿದಿರೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ – ತಾಯಿ ಮಗ ಮೃತ್ಯು

0
2

ಮೂಡುಬಿದಿರೆ : ಇಲ್ಲಿನ ಪುರಸಭೆ ವ್ಯಾಪ್ತಿಯ ಮಹಾವೀರ ರಸ್ತೆಯಲ್ಲಿ ಮೆಸ್ಕಾಂ ಕಚೇರಿ ಸಮೀಪದ ಪೆಟ್ರೋಲ್ ಬಂಕ್ ಹತ್ತಿರ ಮಂಗಳವಾರ ಸಾಯಂಕಾಲ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗ ಮೃತಪಟ್ಟಿದ್ದಾರೆ.

ಮೂಡುಬಿದಿರೆ ಗಂಟಾಲ್ಕಟ್ಟೆ ನೀರಲ್ಕೆ ನಿವಾಸಿಯಾದ ಪ್ರೇಮಾ(68) ಮತ್ತು ಮಗ ಶ್ರೀನಿವಾಸ ಶೆಟ್ಟಿ(ಸೀನ) ಸಾವನ್ನಪ್ಪಿದವರು . ಇವರು ಮೂಡುಬಿದಿರೆಯಿಂದ ಗಂಟಾಲ್ಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಇವರ ದ್ವಿಚಕ್ರ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಪ್ರೇಮಾ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಸೀನ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here