ಬೆಂಗಳೂರು: ಬಿಲ್ಲವ ಅಸೋಸಿಯೇಶನ್ ಬೆಂಗಳೂರು (ರಿ.) ಇದರ ಸುವರ್ಣ ಸಂಭ್ರಮ -2025 ಕಾರ್ಯಕ್ರಮವು ಆ. 10ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೆಂಗಳೂರು ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಜರಗಲಿದೆ.
ಜನಾರ್ದನ ಪೂಜಾರಿಯವರ ಶುಭಾಶಿರ್ವಾದದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ನಾರಾಯಣ ಗುರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಅವರು ಆಶೀರ್ವಚನ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಎಂ.ಎಲ್.ಸಿ. ಬಿ.ಕೆ. ಹರಿಪ್ರಸಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಿ.ಕೆ. ಶಿವಕುಮಾರ್ ಅವರು ಬಿಲ್ಲವ ಆಚಾರ-ವಿಚಾರಗಳು ಎಂಬ ಪುಸ್ತಕದ ಬಿಡುಗಡೆ ಮಾಡಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ. ಸುನೀಲ್ ಕುಮಾರ್ ಕಾರ್ಕಳ, ಉಮಾನಾಥ ಎ. ಕೋಟ್ಯಾನ್ ಮೂಡುಬಿದಿರೆ, ಬೆಳೂರು ಗೋಪಾಲಕೃಷ್ಣ, ಆರ್. ಗವಿಯಪ್ಪ ಹೊಸಪೇಟೆ, ಭೀಮಣ್ಣ ಟಿ. ನಾಯಕ್, ಎಂ. ಸತೀಶ್ ರೆಡ್ಡಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ್, ಮಾಜಿ ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಭಾಗವಹಿಸಲಿದ್ದಾರೆ.
ಬಿಲ್ಲವ ಫ್ಯಾಮಿಲಿ ದುಬೈ ಇದರ ಮಾಜಿ ಅಧ್ಯಕ್ಷೆ ಸತೀಶ್ ಪೂಜಾರಿ ಹಾಗೂ ನೂತನ ಅಧ್ಯಕ್ಷರಾಗಿರುವ ದೀಪಕ್ ಎಸ್.ಪಿ ಅವರಿಗೆ ಸನ್ಮಾನ ಕಾರ್ಯಕ್ರಮವಿದೆ. ಸಮಾರಂಭದಲ್ಲಿ ಅತಿಥಿಗಳಾಗಿ ಡಾ. ತಿಮ್ಮೇಗೌಡ, ಹೆಚ್.ಎಸ್. ಜೈರಾಜ್, ನವೀಣ್‌ಚಂದ್ರ ಸುವರ್ಣ, ಪದ್ಮರಾಜ್, ಹರೀಶ್ ಜಿ. ಅಮೀನ್, ಸೂರ್ಯಕಾಂತ ಸುವರ್ಣ, ನಳಿನಾಕ್ಷಿ ಕಣ್ಣಪ್ಪ ಹಾಗೂ ಹರೀಶ್ ಗುಜರಾತ್ ಭಾಗವಹಿಸಲಿದ್ದಾರೆ.