ಹೆಜಮಾಡಿ: ಬಿರುವೆರ್ ಬ್ರದರ್ಸ್ ಹೆಜಮಾಡಿ ಇವರ ಆಶ್ರಯದಲ್ಲಿ ದಿನಾಂಕ 24.08.2025 ರಂದು ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹೆಜಮಾಡಿ ಬಿಲ್ಲವರ ನಾಲ್ಕು ಕರೆಯ ಸದಸ್ಯರಿಗೆ ವಿವಿಧ ಪಂದ್ಯಾಟ ಗಳನ್ನು ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಿರುವೆರ್ ಬ್ರದರ್ಸ್ ಹೆಜಮಾಡಿಯ ಅಧ್ಯಕ್ಷ ಮನೋಜ್ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಬಿಲ್ಲವ ಸಂಘದ ಮಾಜಿ ಅಧ್ಯಕ್ಷರುಗಳಾದ ಲೋಕೇಶ್ ಅಮೀನ್, ಜಿನರಾಜ್ ಬಂಗೇರ, ದೊಂಬ ಪೂಜಾರಿ, ಪಂಚಾಯತ್ ಉಪಾಧ್ಯಕ್ಷ ಮೋಹನ್ ಸುವರ್ಣ, ಕೋಡಿಕರೆ ಅಧ್ಯಕ್ಷ ಸಂಜೀವ ಜೆ ಕೋಟ್ಯಾನ್, ಮೂಡುಕರೆ ಅಧ್ಯಕ್ಷ ಶ್ರೀನಿವಾಸ ಕೋಟ್ಯಾನ್, ನಡೀಕರೆ ಅಧ್ಯಕ್ಷ ವಿಶ್ವನಾಥ್ ಕೊಪ್ಪಲ, ಯುವವಾಹಿನಿ ಹೆಜಮಾಡಿ ಘಟಕದ ಅಧ್ಯಕ್ಷ ನಿಶಾಂಕ್ ಕೋಟ್ಯಾನ್, ಮೂಲ್ಕಿ ರೋಟರಿ ಕ್ಲಬ್ ನ ಅಧ್ಯಕ್ಷ ಶಿವರಾಮ್. ಜಿ. ಅಮೀನ್ ಭಾಗವಹಿಸಿದ್ದರು. ಹಿರಿಯ ಸದಸ್ಯ ಲೀಲಾಧರ ಅಮೀನ್, ಕೀರ್ತನ್ ಪೂಜಾರಿ,ಲೀಲೇಶ್, ಪ್ರಸಾದ್ ಆಡ್ಕ, ಭಾಸ್ಕರ್, ಗುರುಪ್ರಸಾದ್, ಮನೋಹರ್, ಕಾರ್ತಿಕ್, ಸಚಿನ್, ರವಿ, ಅಶ್ವಿನ್ ಮುಂತಾವರು ಉಪಸ್ಥಿತರಿದ್ದರು.
ಸಮಾರೋಪ:- ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಹೆಜಮಾಡಿ ಬಿಲ್ಲವ ಸಂಘದ ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜಮಾಡಿ, ಮೂಲ್ಕಿ ಬಿರುವೆರ್ ಕುಡ್ಲ ದ ಗೌರವ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಹೆಜಮಾಡಿ ಗ್ರಾಮ. ಪಂಚಾಯತ್ ಅಧ್ಯಕ್ಷೆ ರೇಷ್ಮಾ ಮೆಂಡನ್, ಬಿಲ್ಲವ ಸಂಘದ ಮಹಿಳಾ ಮಂಡಳಿಯ ಅಧ್ಯಕ್ಷೆ ಲಾವಣ್ಯ ಪ್ರಭೋದ್, ಕ್ರೀಡಾಂಗಣದ ಉಸ್ತುವಾರಿ ಮೋಹನ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಹೆಜಮಾಡಿ ಯ ನಾಲ್ಕು ಕರೆಯ ಸದಸ್ಯರಿಗೆ ನಡೆದ ಕ್ರಿಕೆಟ್ ಪಂದ್ಯಾಟ ಮತ್ತು ಹಗ್ಗ ಜಗ್ಗಾಟದಲ್ಲಿ ಮೂಡುಕರೆ ಪ್ರಥಮ, ಪಡುಕರೆ ಗೆ ದ್ವಿತೀಯ ಪ್ರಶಸ್ತಿ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು

