ಬಂಟ್ವಾಳ : ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ವತಿಯಿಂದ ಸಂಘಟನೆಯ 5 ನೇ ವರ್ಷದ ಯಶಸ್ವಿ ಕಾರ್ಯಕ್ರಮವಾದ “ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ” ಎಂಬ ವಿಶೇಷ ಕಾರ್ಯಕ್ರಮ ಕಡೆ ಶಿವಾಲಯ ಗ್ರಾಮದ ಪುಣ್ಕೆದಡಿ ಎಂಬಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಯಶವಂತ್ ಸಾಲಿಯಾನ್ ಪತ್ತುಕೊಡಂಗೆ ರವರ ಅಧ್ಯಕ್ಷತೆಯಲ್ಲಿ ಜರಗಿತು
ಪ್ರಗತಿಪರ ಕೃಷಿಕ ತನಿಯಪ್ಪ ಪೂಜಾರಿ ಹೊಸಮನೆ ಬಿಳಿಯೂರು ಬೇಸಾಯದ ಗದ್ದೆಗೆ ಹಾಲು ಏರೆದು, ನೇಜಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕೃಷಿ ಕ್ಷೇತ್ರದತ್ತ ಯುವ ಜನತೆಯ ಚಿತ್ತ ಹರಿಯಬೇಕಿದೆ ಮುಂದಿನ ದಿನಗಳಲ್ಲಿ ಯುವಜನರು ಕೃಷಿ ಕ್ಷೇತ್ರದತ್ತ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ರಾವ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸೀನ ನಾಯ್ಕ್ ನೆಕ್ಕಿಲಾಡಿ, ಹರಿಶ್ಚಂದ್ರ ಕಾಡಬೆಟ್ಟು, ಹರಿನಾಕ್ಷಿ ಪೆರ್ಲಾಪು, ವಶೀತಾ ನೆತ್ತರ, ಪೆರ್ಲಾಪು ಶಾಲಾ ಮುಖ್ಯ ಶಿಕ್ಷಕ ಬಾಬು ಪೂಜಾರಿ, ಟ್ರಸ್ಟಿನ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ಕಲ್ಲಾಜೆ, ಟ್ರಸ್ಟಿಗಳಾದ ಲೋಕನಾಥ ಪೂಜಾರಿ ತಿಮರಾಜೆ, ವಿದ್ಯಾಧರ ಪೂಜಾರಿ ಅಣ್ಣೆಂಗಳ, ಪ್ರಧಾನ ಸಂಚಾಲಕರಾದಂತಹ ದಿನೇಶ್ ಪೂಜಾರಿ ಸುರ್ಲಾಜೆ, ಕಾರ್ಯದರ್ಶಿ ಸಂದೇಶ ಪೂಜಾರಿ ಕುಂಡಾಜೆ, ಮಾಣಿ ಬಿಲ್ಲವ ಸಂಘದ ಅಧ್ಯಕ್ಷ ಸುರೇಶ ಪೂಜಾರಿ ಸೂರ್ಯ, ನಾರಾಯಣ ಸಾಲಿಯಾನ್, ಹರೀಶ್ ಬಾಕಿಲ, ಪೆರ್ಲಾಪು ಶಾಲಾ ದೈಹಿಕ ಶಿಕ್ಷಕ ಭಾಸ್ಕರ ನಾಯ್ಕ್, ಮೊದಲಾದ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಸಂಘಟನೆಯು ಕಳೆದ ಐದು ವರ್ಷಗಳಿಂದ ಗ್ರಾಮದಲ್ಲಿ ಗದ್ದೆ ಸಾಗುವಳಿ ಮಾಡದೆ ಹಡಿಲು ಬಿದ್ದ ಗದ್ದೆಯನ್ನು ಗುರುತಿಸಿ ಬತ್ತದ ಕೃಷಿ ಮಾಡಿ ಅದರಿಂದ ಬರುವ ಆದಾಯವನ್ನು ಸಮಾಜದ ವಿವಿಧ ಕಾರ್ಯಕ್ರಮಗಳಿಗೆ ನಿಯೋಗಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಉತ್ಸಾಹಿ ಯುವಕ ಯುವತಿಯರಿಗೆ ಮತ್ತು ಮಕ್ಕಳಿಗಾಗಿಯೇ ವಿಶೇಷವಾಗಿ ಕೆಸರುಗದ್ದೆಯಲ್ಲಿ “ಕೆಸರ್ದ ಕಂಡೊಡು ಕುಸಲ್ದ ಗೊಬ್ಬು” ಎನ್ನುವ ವಿವಿಧ ಕ್ರೀಡಾಕೂಟಗಳು ಜರಗಿತು.
ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 400ಕ್ಕೂ ಹೆಚ್ಚು ಜನ ಭಾಗವಹಿಸಿ ಸಂಭ್ರಮಿಸಿದರು.