ಬಾರ್ಯ :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಬಾರ್ಯ ಇದರ ನವೆಂಬರ್ 05 ರಂದು ನಡೆಯುವ 2025 ರಿಂದ 2030ರ ವರೆಗಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಪ್ರಸನ್ನ ಗೌಡ,ಪ್ರವೀಣ್ ರೈ, ಪ್ರಶಾಂತ್ ಪೈ, ಚಂದ್ರಶೇಖರ ಕುಂಡಡ್ಕ, ಮೋಹನ್ ಗೌಡ, ಹರ್ಷಿತ್ ಕಲಾಯ, ಹಿಂದುಳಿದ ವರ್ಗ ಎ ಕ್ಷೇತ್ರ ದಿಂದ ಸೇಸಪ್ಪ ಕೋಟ್ಯಾನ್, ಹಿಂದುಳಿದ ಬಿ ಕ್ಷೇತ್ರ ದಿಂದ ರಾಜೇಶ್ ರೈ ಹೆನ್ನಡ್ಕ, ಮಹಿಳಾ ಕ್ಷೇತ್ರದಿಂದ ಸವಿತಾ ವೆಂಕಟೇಶ್, ಹೇಮಾವತಿ ಸುರೇಶ್, ಪರಿಶಿಷ್ಟ ಜಾತಿ ಕ್ಷೇತ್ರ ದಿಂದ ಸುರೇಶ್ ಸುಣ್ಣಜೆ, ಪರಿಶಿಷ್ಟ ಪಂಗಡದಿಂದ ಶಿವರಾಮ ನಾಯ್ಕ ಕೆಳಗಿನಂಗಡಿ ಇವರುಗಳು ಬಿ.ವಿ. ಪ್ರತಿಮಾ ರಿಟರ್ನಿಂಗ್ ಅಧಿಕಾರಿಯವರಿಗೆ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚುನಾವಣಾ ಪ್ರಭಾರಿಗಳಾದ ಮಂಡಲ ಕಾರ್ಯದರ್ಶಿ ಸುಂದರ್ ಹೆಗ್ಡೆ, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೆಂಕ್ಯಾರ್,
ಪುತ್ತಿಲ ಶಕ್ತಿ ಕೇಂದ್ರ ಪ್ರಮುಖರಾದ ಪ್ರವೀಣ್ ಪೂಜಾರಿ ಬೇಂಗಿಲ, ದಯಾನಂದ ಆಳ್ವ, ಪಂಚಾಯತ್ ಸದಸ್ಯರಾದ ಧರ್ಣಪ್ಪ ಗೌಡ, ವಸಂತ ಬೋಳ್ಡೆಲ್, ಕಮಲಾಕ್ಷ ಗೌಡ, ಬೂತ್ ಪ್ರಮುಖರು, ಜನಪ್ರತಿನಿದಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

