ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ -ಕುಟೀರಕ್ಕೆ ಭಾರತೀಯ ಜನತಾ ಪಾರ್ಟಿಯ ಕೇರಳ ಕೋಯಿಕೋಡ್ ಉತ್ತರ ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ ಕೆ.ಬೇಟಿ ನೀಡಿ, ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಇವರೊಂದಿಗೆ ಕಾಸರಗೋಡು ಗೋ- ಕುಟೀರದ ನಿರ್ಮಾಣ ಕಾಮಗಾರಿಯ ಕುರಿತು ಚರ್ಚಿಸಿದರು.
ಕಾಸರಗೋಡು ಗೋ – ಕುಟೀರದ ಆವರಣದಲ್ಲಿ ಸಾವಯವ ಕೃಷಿ, ಗ್ರಾಮೀಣ ಸ್ವ ಉದ್ಯೋಗ ಕೇಂದ್ರ ವಿದ್ಯಾರ್ಥಿಗಳು,ಯುವಜನರು, ಮಹಿಳೆಯರಿಗಾಗಿ ಹೊಲಿಗೆ, ವಸ್ತ್ರ ವಿನ್ಯಾಸ, ಡಿ ಸೈನಿಂಗ್, ಕಂಪ್ಯೂಟರ್,ಡಿಜಿಟಲ್ ಮಾಧ್ಯಮ ಕೇಂದ್ರ ಗ್ರಂಥಾಲಯ ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್,ಗೋ- ವಿಶ್ರಾಂತಿ ಗ್ರಹ ಮುಂತಾದ ವಿವಿಧ ಕಾರ್ಯ ಯೋಜನೆಗಳು ಮಾಹಿತಿಯನ್ನು ಪಡೆದರು.ನ್ಯಾಯವಾದಿ ಶ್ರೀಕಾಂತ ಕೆ ಅವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಟಾನದ ವತಿಯಿಂದ ಶಾಲು ಹೊದಿಸಿ ಹಾರವನ್ನಿತ್ತು ಗೋ-ಕುಟೀರದ ಪೋಸ್ಟರ್ ನೀಡಿ ಸನ್ಮಾನಿಸಲಾಯಿತು.ನಗರ ಸಭಾ ಕೌನ್ಸಿಲರ್ ಶಾರದಾ ಬಿ, ಶಂಕರ ಕೆ, ಚಂದ್ರಶೇಖರ ಬಿ ಮೊಗ್ರಾಲ್ ಪುತ್ತೂರ್ ಉಪಸ್ಥಿತರಿದ್ದರು.
Home Uncategorized ಕಾಸರಗೋಡು ಗೋ-ಕುಟೀರಕ್ಕೆ ಬಿ.ಜೆ.ಪಿ ಕೇರಳ ಕೋಯಿಕೋಡ್ ಉತ್ತರ ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ ಕೆ. ಭೇಟಿ

