ಕಾರ್ಕಳ : ತಾಲೂಕಿನಾದ್ಯಂತ 35 ಕಡಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಎಲ್ಲದಕ್ಕೂ ಬೆಲೆ ಏರಿಕೆ ಕಂಡಿದೆ. ಸಾಲ ಮಾಡಿ ಮನೆ ಕಟ್ಟಲು ಹೊರಟ ಕುಟುಂಬಗಳು ಬರೀ ದಾಖಲೆಗಾಗಿ ಹಣವನ್ನು ವ್ಯಯಿಸುವ ಕಾಲ ಬಂದಿದೆ. 13 ವರ್ಷಗಳಲ್ಲಿ ಶಾಸಕರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ರಾಜ್ಯ ಸರ್ಕಾರದ ನಯ ಪೈಸೆ ಕೆಲಸ ಪಂಚಾಯತ್ ನ ಖಾತೆಗೆ ಕೊಡುತ್ತಿಲ್ಲ.
ಗ್ಯಾರಂಟಿ ಯೋಜನೆಗಳನ್ನು ನೀಡಬೇಕಾಗಿ ಅದೆಷ್ಟೋ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ. ಯಾವುದೇ ವರ್ಗಕ್ಕೆ ಸಹಕಾರಿಯಾಗುವ ಕೆಲಸವನ್ನು ಈ ಸರ್ಕಾರ ಮಾಡುತ್ತಿಲ್ಲ. ಭ್ರಷ್ಟಾಚಾರ ಬಿಟ್ಟರೆ ಈ ಸರ್ಕಾರಕ್ಕೆ ಬೇರೇನೂ ಗೊತ್ತಿಲ್ಲ.
ಅಭಿವೃದ್ಧಿ ಕೆಲಸಗಳಿಗೆ ಸದಾ ಅಡ್ಡಗಾಲು ಹಾಕುವುದೇ ಕಾಂಗ್ರೆಸ್ ನ ಕೆಲಸ. ಸತ್ಯಾಸತ್ಯತೆ ಜನತೆ ತಿಳಿದಿದೆ ಕಾರ್ಕಳದ ಜನರು ಮೂರ್ಖರಲ್ಲ. ಬಿಜೆಪಿ ಗ್ರಾಮ ಸಮಿತಿ ನಿಟ್ಟೆ ವತಿಯಿಂದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ನಿಕಟಪೂರ್ವ ಜಿಲ್ಲಾ ಪಂ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಪ್ರವೀಣ್ ಸಾಲ್ಯಾನ್ ನಿಟ್ಟೆ, ಮೊದಲಾದವರು ಉಪಸ್ಥಿತರಿದ್ದರು.

