ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ(ರಿ), ಲಯನ್ಸ್ ಕ್ಲಬ್ ಅಲಂಗಾರು ಹಾಗೂ ಇಮ್ಯಾಕುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ಕುಪ್ಪೆಪದವು ಘಟಕದ ವತಿಯಿಂದ ದಿನಾಂಕ 23/11/2025ರಂದು ಭಾನುವಾರ ದಿ।ಲಾರೆನ್ಸ್ ಪಿಂಟೊ ಸ್ಮರಣಾರ್ಥ ಮರಿಯಗಿರಿ ಆರೋಗ್ಯಕೇಂದ್ರ ಕುಪ್ಪೆಪದವು, ಮಂಗಳಾ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್, ಕೆ. ಎಂ. ಸಿ. ಆಸ್ಪತ್ರೆ ಮಂಗಳೂರು, ದಿ।ಲಾರೆನ್ಸ್ ಗೆಳೆಯರ ಬಳಗ ಮತ್ತು ಕುಪ್ಪೆಪದವು ನಾಗರಿಕರ ಸಹಕಾರದೊಂದಿಗೆ ರಗ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಚರ್ಚ್ ಹಾಲ್’ನಲ್ಲಿ ಏರ್ಪಡಿಸಲಾಗಿತ್ತು.
ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕುಪ್ಪೆಪದವು ಚರ್ಚ್ ಇದರ ಧರ್ಮಗುರುಗಳಾದ ವಂದನೀಯ ಮಾರ್ಸೆಲ್ ಸಲ್ದಾನ್ಹ, ಮುಖ್ಯ ಅತಿಥಿಗಳಾಗಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಪ್ರವೀಣ್ ಆಳ್ವ ಗುಂಡ್ಯ, ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಅಮಿತ್ ಡಿಸಿಲ್ವ, ಮರಿಯಗಿರಿ ಕಾನ್ವೆಂಟ್ ಇದರ ಮುಖ್ಯ ಭಗಿನಿ ಸಿI ಮೇಬಲ್, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಲೋನಾ ರೊಸಾರಿಯೊ, ದಿ।ಲಾರೆನ್ಸ್ ಅವರ ಹೆತ್ತವರಾದ ಶ್ರೀ ರೊನಾಲ್ಡ್ ಹಾಗೂ ಲವಿನಾ ಪಿಂಟೊ, ಕೆ. ಎಂ. ಸಿ. ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಹರ್ಶಿತ್ ಮತ್ತು ಡಾ. ಸಹೆಲ್, ಮಂಗಳಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುಬ್ರಹ್ಮಣ್ಯ ನಾಯಕ್ ಇವರು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಕುಪ್ಪೆಪದವು ಘಟಕದ ಅಧ್ಯಕ್ಷರಾದ ಶ್ರೀ ತೋಮಸ್ ರೊಸಾರಿಯೊ ಸ್ವಾಗತಿಸಿದ ಈ ಕಾರ್ಯಕ್ರಮವನ್ನು ಕಾರ್ಯದರ್ಶಿ ಶ್ರೀಮತಿ ಶರ್ಮಿಳಾ ಕುಟಿನ್ಹಾರವರು ನಿರೂಪಿಸಿ ವಂದನಾರ್ಪಣೆಗೈದರು. ಕಥೊಲಿಕ್ ಸಭಾ, ಲಯನ್ಸ್ ಕ್ಲಬ್ ಅಲಂಗಾರು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಜರಿದ್ದರು. ಒಟ್ಟು 60 ಮಂದಿ ರಗ್ತದಾನ ಮಾಡಿ ಈ ಶಿಬಿರವನ್ನು ಯಶಸ್ವಿಗೊಳಿಸಿದರು.

