ಮುಲ್ಕಿ : ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್, ಸೈಂಟ್ ಅನ್ಸ್ ಶಿಕ್ಷಣ ಸಂಸ್ಥೆ ಇದರ ಸಯುಕ್ತ ಆಶ್ರಯದಲ್ಲಿ, ಶ್ರೀನಿವಾಸ ವೈದ್ಯಕೀಯ ವಿದ್ಯಾಲಯ ರಕ್ತದಾನ ವಿಭಾಗ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜರಗಿತು. 51 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪರ ನ ಅಧ್ಯಕ್ಷ ಅನಿಲ್ ಕುಮಾರ್ ಉದ್ಘಾಟಿಸಿ, ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಪರ್ಯಾಯ ವಸ್ತುವನ್ನು ತಯಾರಿಸಲು ಸಾಧ್ಯವಿಲ್ಲ. ಅದು ರಕ್ತದಾನದ ಮೂಲಕವೇ ನಡೆದು ಅಗತ್ಯ ಉಳ್ಳವರ ಪ್ರಾಣವನ್ನು ಕಾಪಾಡಬಹುದು ಆದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ರಕ್ತದಾನ ಮಾಡಿ ಜೀವ ಉಳಿಸಬೇಕಾಗಿ ಕರೆ ನೀಡಿದರು.
ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಮುಖ್ಯ ಅತಿಥಿಯಾಗಿ, ಪ್ರಸ್ತುತ ಕಾಲದಲ್ಲಿ ರಕ್ತದಾನಕ್ಕೆ ಯುವ ಜನತೆ ಹಿಂದೇಟು ಹಾಕುತ್ತಿರುವುದು ನಿಜಕ್ಕೂ ಖೇಧನೀಯ ಕಳೆದ ವರ್ಷ ನಮ್ಮ ಸಂಸ್ಥೆ 1289 ರಕ್ತ ಸಂಗ್ರಹಿಸಿ ಜಿಲ್ಲೆಯ ವಿವಿಧ ರಕ್ತ ಸಂಗ್ರಹಣ ಕೇಂದ್ರಕ್ಕೆ ನೀಡಿರುವುದು ಅದರಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳು ಹಾಗೂ ಕಾಲೇಜಿನ ಪಾಲು ಇದೆ ಎಂದರು. ಶ್ರೀನಿವಾಸ್ ಕಾಲೇಜಿನ ವೈದ್ಯಾಧಿಕಾರಿ ಡಾಕ್ಟರ್ ಮಧುಕರ ಮಾತನಾಡಿ, ವಿದ್ಯಾರ್ಥಿಗಳು ವರ್ಷಕ್ಕೆ ನಾಲ್ಕು ಬಾರಿ ಕನಿಷ್ಠಪಕ್ಷ ಎರಡು ಬಾರಿಯಾದರೂ ರಕ್ತದಾನ ಮಾಡಿ ಅವಶ್ಯಕತೆ ಉಳ್ಳವರ ಪ್ರಾಣವನ್ನು ಕಾಪಾಡಬೇಕು. ಅಲ್ಲದೆ ರಕ್ತದಾನ ಮಾಡಿ ಅನೇಕ ಪ್ರಯೋಜನಗಳು ನಮಗೂ ದೊರಕುತ್ತದೆ ಎಂಬ ಮಾಹಿತಿಯನ್ನು ನೀಡಿದರು. ಅಧ್ಯಕ್ಷ ಸ್ಥಾನ ವಹಿಸಿದ ಶಿಕ್ಷಣ ಸಂಸ್ಥೆ ಯ ಮುಖ್ಯ ಸಂಚಾಲಕ ಡಾಕ್ಟರ್ ಲೋಬೋ ಮಾತನಾಡಿ ರಕ್ತದಾನದಿಂದ ಅನೇಕ ಪ್ರಾಣ ಉಳಿಯುವುದು ಮಾತ್ರವಲ್ಲದೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದರು. . ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸರಿತ ಡಿʼಸೋಜ ಮುಖ್ಯ ಪ್ರಾಧ್ಯಾಪಕಿ ಪ್ರೊಫೆಸರ್ ಮರಿಯ ಬರೆಟೊ ಪ್ರತಿಭಾ ಹೆಬ್ಬಾರ್, ಡಾಕ್ಟರ್ ಉದಯ್ ನಾಯಕ್ ಬ್ಲಡ್ ಬ್ಯಾಂಕ್ ಸಂಚಾಲಕಿ ಸವಿತಾ, ವಿದ್ಯಾ ಸಂಸ್ಥೆಯ ಶಿಕ್ಷಕಿ ಸೋನಿಯಾ, ಎಬ್ಬಿ,ಮೊದಲಾದವರು ಉಪಸ್ಥಿತರಿದ್ದರು.