ರಕ್ತದಾನ ಶಿಬಿರ — ಮಾತೃಭಾರತಿ ಸೇವಾ ಸಂಗಮ ವಿದ್ಯಾಕೇಂದ್ರ, ತೆಕ್ಕಟ್ಟೆ

0
49

ಮಾತೃಭಾರತಿ ಸೇವಾ ಸಂಗಮ ವಿದ್ಯಾಕೇಂದ್ರ, ತೆಕ್ಕಟ್ಟೆ : ರಕ್ತದಾನ ಶಿಬಿರ. 12.10.2025 ಭಾನುವಾರ ದಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ಸೇವಾಸಂಗಮ ಮಾತೃಭಾರತಿ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ್ ಶೆಟ್ಟಿ, ರೆಡ್ ಕ್ರಾಸ್ ಖಜಾಂಚಿ ಶ್ರೀಯುತ ಶಿವರಾಮ ಶೆಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಂಭಾಶಿ ಇದರ ವೈದ್ಯಾಧಿಕಾರಿಗಳಾದ ಶ್ರೀಯುತ ರಾಘವೇಂದ್ರ ಹೆಬ್ಬಾರ್, ವಿದ್ಯಾಭಾರತಿ ಉಡುಪಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಯುತ ಮಹೇಶ್ ಹೈಕಾಡಿ , ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾದ ಶ್ರೀಯುತ ಸಂಜೀವ್ ಜಿ, ಮಾತೃಭಾರತಿ ಜಿಲ್ಲಾ ಪ್ರಮುಖ ಶ್ರೀಮತಿ ಸಿಂಧು ಐತಾಳ್ , ಆಡಳಿತ ಮಂಡಳಿಯ ಸಂಚಾಲಕರಾದ ಕಮಲಾಕ್ಷ ಪೈ, ಮಾತೃ ಭಾರತೀಯ ಅಧ್ಯಕ್ಷರಾದ ಶೃತಿ ಉಡುಪ ಮತ್ತು ಮುಖ್ಯೋಪಾಧ್ಯಾಯ ಹರ್ಷಕೋಟೇಶ್ವರ ಮತ್ತು ಮಾತೃಭಾರತಿ ಸದಸ್ಯರು,ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here