ಬ್ರಹ್ಮಾವರ: ‘ಮೊಗವೀರ ಸಂಘಟನೆಯ ಮೂಲಕ ಜಿಲ್ಲೆಯಲ್ಲಿ ಈ ಬಾರಿ ಐದು ಸಾವಿರ ಯುನಿಟ್ ರಕ್ತ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಉಡುಪಿ ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಹೇಳಿದರು.
ಸ್ವಾತಂತ್ರೋತ್ಸವ ಪ್ರಯುಕ್ತ ಉಪ್ಪರಿನ ಮೊಗವೀರ ಯುವ ಸಂಘಟನೆಯು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮಣಿಪಾಲ ಕೆಎಂಸಿ ರಕ್ತನಿಧಿ, ಜಿಲ್ಲಾಡಳಿತ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಪ್ಪರು ಜ್ಞಾನೇಶ್ವರಿ ಸಭಾಭವನದಲ್ಲಿ ಆಯೋಜಿಸಿದ್ದ 18 ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉಪ್ಪರು ಮೊಗವೀರ ಯುವ ಸಂಘಟನೆ ಸ್ಥಾಪಕಾ-ಧ್ಯಕ್ಷ ಲೋಕೇಶ್ ಜಿ. ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ ಅಮೀನ್ ಕೋಡಿ, ಮಾಜಿ ಅಧ್ಯಕ್ಷ ಶಿವರಾಮ ಕೋಟ್ಯಾನ್, ಸಂಘಟನೆಯ ರಾಜೇಂದ್ರ ಸುವರ್ಣ ಹಿರಿಯಡ್ಕ, ಉಳ್ಳೂರು ಘಟಕದ ಉಪಾಧ್ಯಕ್ಷ ಪ್ರಜ್ವಲ್ ಕುಂದರ್, ಪ್ರಧಾನ ಕಾರ್ಯದರ್ಶಿ ಶರತ್ ಕುಂದರ್, ಖಜಾಂಚಿ ಅಶೋಕ್ ಕೋಟ್ಯಾನ್ ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕ ಸಂತೋಷ್ ಶೆಟ್ಟಿ, ಮಣಿಪಾಲ ಕೆಎಂಸಿ ರಕ್ತನಿಧಿ ನಿರ್ದೇಶಕಿ ಡಾ.ದೀಪಿಕಾ ಭಾಗವಹಿಸಿದ್ದರು.
ನಿವೃತ್ತ ಯೋಧರಾದ ಚಂದ್ರ ಅಮೀನ್ ಬಾರ್ಕೂರು, ಮುರಳೀಧರ ಕೆ. ಅವರನ್ನು ಸನ್ಮಾನಿಸಲಾಯಿತು. ಮೊಗವೀರ ಯುವ ಸಂಘಟನೆಯ ಗೌರವ ಸಲಹೆಗಾರ ಕೆ.ಸಿ. ಅಮೀನ್ ಸ್ವಾಗತಿಸಿದರು. ದಯಾನಂದ ಕರ್ಕೇರ ನಿರೂಪಿಸಿದರು. ರತ್ನಾಕರ ಮೊಗವೀರ ವಂದಿಸಿದರು. ಆಸುಪಾಸಿನ ಕಾಲೇಜುಗಳು, ವಿವಿಧ ಸಂಘಟನೆಗಳ A ಸದಸ್ಯರು, ಸಾರ್ವಜನಿಕರಿಂದ* 100ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು.