ದಿನಾಂಕ 8.10.2025 ರಂದು ವಿಜಯ ಕಾಲೇಜು, ಮುಲ್ಕಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್ ಕ್ರಾಸ್ ರೋವರ್ಸ್ ರೆಂಜರ್ಸ್, ಎನ್ ಸಿ ಸಿ ಇದರ ಆಶ್ರಯದಲ್ಲಿ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಇವರ ಸಹಕಾರದೊಂದಿಗೆ ರಕ್ತದಾನ ಶಿಬಿರವನ್ನು ವಿಜಯ ಕಾಲೇಜು, ಮೂಲ್ಕಿಯಲ್ಲಿ ಹಮ್ಮಿಕೊಳ್ಳಲಾಯಿತು . ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ. ವೆಂಕಟೇಶ ಭಟ್, ವಿದ್ಯಾರ್ಥಿಗಳಿಗೆ ರಕ್ತದಾನದ ಬಗ್ಗೆ ಮಾಹಿತಿಯನ್ನು ನೀಡಿದರು.

ಲಯನ್ಸ್ ಕ್ಲಬ್ ಇನ್ಸ್ಪಾಯರ್ ಬಪ್ಪನಾಡು ಇದರ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ್ ಹೆಬ್ಬಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ರಕ್ತದಾನದಿಂದ ಜೀವವನ್ನು ಉಳಿಸಿ ಇನ್ನೊಬ್ಬರಿಗೆ ಜೀವದಾನವನ್ನು ಮಾಡಿ ಎಲ್ಲರಿಗೂ ಸಹಾಯವನ್ನು ಮಾಡಬೇಕು ಎಂದು ಹೇಳಿದರು. ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಇದರ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ , ಮಾಜಿ ವಲಯ ಅಧ್ಯಕ್ಷರಾದ ಪ್ರತಿಭಾ ಹೆಬ್ಬಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅರುಣ್ ಕುಮಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಶೈಲಜಾ, ಕೆಎಂಸಿ ಆಸ್ಪತ್ರೆ ಇದರ ವೈದ್ಯಾಧಿಕಾರಿಯಾದ ಡಾ. ವೃಂದ, ನಿಕಟಪೂರ್ವ ಅಧ್ಯಕ್ಷರಾದ ಬಿ ಶಿವಪ್ರಸಾದ್, ಕಲ್ಲಪ್ಪ ತಡವಲಗ ಉಪಸ್ಥಿತರಿದ್ದರು. ಮುಲ್ಕಿ ಪೊಲೀಸ್ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿಗಳು ಕೂಡ ರಕ್ತದಾನವನ್ನು ಮಾಡಿದರು. 72 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು ಕುಮಾರಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಪ್ರಾರ್ಥಿಸಿ, ಕುಮಾರ್ ಅಭಿನಂದ ವಂದಿಸಿದರು.