ಇಂಜನಿಯರ್ ವಿದ್ಯಾರ್ಥಿಗಳ ಕೌಶಲ್ಯ, ಜ್ಞಾನಭಿವೃದ್ದಿಗೆ ಬಿ.ಎಂ.ಎಸ್.ತಾಂತ್ರಿಕ ವಿಶ್ವವಿದ್ಯಾಲಯ ಸಹಕಾರ

0
30

ಬೆಂಗಳೂರು : ಬಿ.ಎಂ.ಎಸ್.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಓಪನ್ ಹೌಸ್ ಪ್ರಾಜೆಕ್ಟ್ ಎಕ್ಸಿಬಿಷನ್ ಆಯೋಜಿಸಲಾಗಿತ್ತು.

ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿ ಡಾ||ಬಿ.ಸುಬ್ಬಾರೆಡ್ಡಿರವರು, ಐ.ಐ.ಐ.ಟಿ ಬೆಎಳೂರು ವಿಭಾಗದ ಮುಖ್ಯಸ್ಥರಾದ ಡಾ||ಮೀನಾಕ್ಷಿ ಡಿಸೋಜ, ಪ್ರಾಂಶುಪಾಲರಾದ ಡಾ||ಭೀಮಶಾ ಆರ್ಯರವರು, ಉಪಪ್ರಾಂಶುಪಾಲರುಗಳಾದ ಡಾ||ರವಿಕುಮಾರ್, ಡಾ||ಶೇಷಾಚಲಂ, ಅಕಾಡೆಮಿಕ್ ಡೀನ್ ಡಾ||ಗೌರಿಶಂಕರ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಇಂಜನಿಯರಿಂಗ್ ಕಲಿಕೆ ಜೊತೆಯಲ್ಲಿ ನೂತನ ಅವಿಷ್ಕಾರ, ಯೋಚನೆ, ಅಲೋಚನೆ ಅನುಷ್ಠಾನಕ್ಕೆ ತರಬೇಕು ಇದರಿಂದ ದೇಶಕ್ಕೆ ಉಪಯೋಗವಾಗಬೇಕು.

ನಮ್ಮ ದೇಶದಲ್ಲಿ ಇಂಜನಿಯರ್ ಅವಶ್ಯಕತೆ ಬಹಳ ಇದೆ. ಹೊಸ ತಂತ್ರಜ್ಞಾನ ಆಳವಡಿಸಿಕೊಳ್ಳಬೇಕು ಮತ್ತು ಜ್ಞಾನದ ವೃದ್ದಿಗಾಗಿ ಓಪನ್ ಹೌಸ್ ಪ್ರಾಜೆಕ್ಟ್ ಎಕ್ಸಿಬಿಷನ್ ಅಯೋಜಿಸಲಾಗಿತ್ತು. ಒಟ್ಟಾರೆ 5086ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮ ವರ್ಷದ 22ವಿದ್ಯಾರ್ಥಿಗಳಿಂದ 60ಪ್ರಾಜೆಕ್ಟ್ ಗಳನ್ನು ಪ್ರದರ್ಶನ ಏರ್ಪಡಿಸಲಾಗಿತ್ತು.

ತಾಂತ್ರಿಕತೆ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ನೂತನ ಯೋಜನೆಗಳು ಅಭಿವೃದ್ದಿಗೆ ಮತ್ತು ತರಿತ್ವ ಕೆಲಸ ಮಾಡಲು ಸಹಕಾರಿಯಾಗುತ್ತದೆ.

ಒಬ್ಬ ಇಂಜನಿಯರ್ ದೇಶ ಕಟ್ಟ ಬಲ್ಲನು, ತಾಂತ್ರಿಕ ಕೌಶಲ್ಯ ಇರುವ ಯುವ ಇಂಜನಿಯರಿಗಳಿಗೆ ಸಹಕಾರ, ಪ್ರೋತ್ಸಾಹ ನೀಡಲು ಬಿ.ಎಂ.ಎಸ್.ತಾಂತ್ರಿಕ ವಿಶ್ವವಿದ್ಯಾಲಯ ಸದಾ ಸಹಕಾರ ನೀಡುತ್ತಿದೆ.

LEAVE A REPLY

Please enter your comment!
Please enter your name here