ಬೋಳ : ಮೇಲಂಗಡಿ ಗೆಳೆಯರ ಬಳಗ ಬೋಳ ಹಾಗೂ ಹಿಂದೂ ಜಾಗರಣ ವೇದಿಕೆ ಬೋಳ ಇವರ ಸಹಭಾಗಿತ್ವದಲ್ಲಿ ೨೪ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆ ಕ್ರೀಡಾಕೂಟವು ಆ. 28 ರಂದು ಬೆಳಿಗ್ಗೆ 9 ಗಂಟೆಯಿಂದ ಜರಗಲಿದೆ.
ಶಾಸಕ ಸುನೀಲ್ ಕುಮಾರ್ ಅವರು ಉದ್ಘಾಟಿಸಲಿದ್ದು, ಜಯರಾಮ್ ಸಾಲ್ಯಾನ್ ಬೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರುಣ್ ಕುಮಾರ್ ನಿಟ್ಟೆ, ಪ್ರಸಾದ್ ಶೆಟ್ಟಿ ನಂದಳಿಕೆ, ಸುನೀಲ್ ಕೆ.ಆರ್. ,ಉದಯ ಶೆಟ್ಟಿ ಗುಂಡುಕಲ್ಲು, ನಿತ್ಯಾನಂದ ಶೆಟ್ಟಿ ಬೆಳ್ಮಣ್, ರವೀಂದ್ರ ಶೆಟ್ಟಿ ಮುಲ್ಲಡ್ಕ ಭಾಗವಹಿಸಲಿದ್ದಾರೆ. ಸಂಜೆಯ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾಶಿವ ಶೆಟ್ಟಿ ಬೋಳ ವಹಿಸಲಿದ್ದು, ದಿನೇಶ್ ಶೆಟ್ಟಿ ಗರ್ದೊಟ್ಟು, ಸೋಮನಾಥ ಶೆಟ್ಟಿ ಬೋಳ, ಮಹೇಶ್ ಶೆಟ್ಟಿ ಬೈಲೂರು, ಪ್ರಶಾಂತ್ ಕಾಮತ್ ಕಾರ್ಕಳ, ಸ್ವರೂಪ್ ಶೆಟ್ಟಿ ಬೆಳ್ಮಣ್, ಜಯರಾಮ ಕುಲಾಲ್ ಮುಂಡ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಾಷಣಕಾರರಾಗಿ ರತ್ನಾಕರ ಅಮೀನ್ ಭಾಗವಹಿಸಲಿದ್ದು, ಕಂಬಳ ಕ್ಷೇತ್ರದ ಸಾಧಕ ಸತೀಶ್ ಶೆಟ್ಟಿ ಬೋಳದ ಗುತ್ತು ಅವರಗಿಗೆ ಸನ್ಮಾನ ಕಾರ್ಯಕ್ರಮವಿದೆ. ಕಾರ್ಯಕ್ರಮದಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ, ಭಜನೆ, ಆಟೋಟ ಸ್ಪರ್ಧೆ, ನೃತ್ಯ ವೈವಿಧ್ಯ, ಸಂಗೀತಾ ಹಾಗೂ ಡ್ಯಾನ್ಸ್ ದಮಾಕಾ ಮನೋರಂಜನೆ ನಡೆಯಲಿದೆ.