ಕಲ್ಲಡ್ಕ: ಕ್ರೀಡಾಕೂಟಗಳಲ್ಲಿ ಶಿಸ್ತು ಮುಖ್ಯವಾಗಿದೆ, ಶಿಸ್ತನ್ನು ರೂಡಿಸಿಕೊಂಡ ಆಟಗಾರ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ. ಆರೋಗ್ಯವಂತ ಪ್ರಜೆ ದೇಶದ ಆಸ್ತಿ ಇದ್ದಂತೆ, ಈ ಅಸ್ತಿ ಶಾಶ್ವತವಾಗಿ ಮುಂದುವರಿಯಬೇಕಾದರೆ ಪಾಠದೊಂದಿಗೆ ಕ್ರೀಡೆಗೂ ಮಹತ್ವ ನೀಡಬೇಕು ಎಂದು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ ಬಿ.ಯಂ. ಹೇಳಿದರು.
ಅವರು ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಬೋಳಂತೂರು ಹಾಗೂ ದಾರುಲ್ ಅಶ್ ಅರಿಯ್ಯ ಆಂಗ್ಲ ಮಾಧ್ಯಮ ಶಾಲೆ ಸುರಿಬೈಲು ಇವುಗಳ ಸಹಯೋಗದಲ್ಲಿ
ಬೋಳಂತೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಕಲ್ಲಡ್ಕ ವಲಯ ಮಟ್ಟದ 14 ಹಾಗೂ 17 ವರ್ಷ ವಯೋಮಿತಿನ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ದಲ್ಲಿ ಅತಿಥಿಯಾಗಿ ಮಾತನಾಡಿದರು.
ಬೋಳಂತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಳಂತೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಶೀರ್ ನಾರೆಂಕೋಡಿ ವಹಿಸಿದ್ದರು. ಕ್ರೀಡಾಂಗಣವನ್ನು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕೂಬ್ . ಡಿ., ಪಂಚಾಯತ್ ಸದಸ್ಯರುಗಳಾದ ಚಂದ್ರಶೇಖರ ರೈ , ಸಂಧ್ಯಾ, ಅನ್ಸರ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್, ನಿವೃತ್ತ ಶಿಕ್ಷಕ ಕೂಸಪ್ಪ ಮಾಸ್ತರ್, ಸರಕಾರಿ ನೌಕರರ ಸಂಘ ಬಂಟ್ವಾಳ ಕಾರ್ಯದರ್ಶಿ ಸಂತೋಷ್, ಗ್ರೇಡ್ 2 ದೈಶಿ ಶಿ ಸಂಘ ಬಂಟ್ವಾಳ ಅಧ್ಯಕ್ಷ ಇಂದು ಶೇಖರ್, ಬೋಳಂತೂರು ಪಂಚಾಯತ್ ಕಾರ್ಯದರ್ಶಿ ಅಸ್ರಫ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಹಮೀದ್ ಟೈಲರ್, ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ, ಕ್ರೀಡಾ ಕೂಟದ ನೋಡಲ್ ಅಧಿಕಾರಿಗಳಾದ ಜಗದೀಶ್ ಕೆ, ಪ್ರಕಾಶ್, ಪ್ರಾಥಮಿಕ ಶಾಲಾ ಜಿಲ್ಲಾ ಸಂಘದ ಅಧ್ಯಕ್ಷ ಶಿವ ಪ್ರಸಾದ ಶೆಟ್ಟಿ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಝಕಾರಿಯಾ ನಾರ್ಶ, ಸಂಚಾಲಕ ಕರಿಂ ಕದ್ಕಾರ್, ಕಾರ್ಯದರ್ಶಿ ಲತೀಫ್ ಪರ್ತಿಪ್ಪಾಡಿ, ಅಂಬಿಕಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸಚಿನ್ ಕುಮಾರ್ ,ಉತ್ತಮ ನಗರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಜಿದ್ ಉಳ್ಳಾಲ, ಭೀಮ್ ಸಂಜೀವಿನಿ ಬೋಳಂತೂರುನ ಅಧ್ಯಕ್ಷ ಸದಾನಂದ, ಗೌರವಾಧ್ಯಕ್ಷ ಶ್ರೀನಿವಾಸ ಬಂಗಾರ ಕೋಡಿ, ಹಳೇ ವಿದ್ಯಾರ್ಥಿ ಸಂಘದ ಗೌರವ ಸಂಚಾಲಕರಾದ ಜಯರಾಜ್ ಬಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮ್ಯಾಮಕುಂಞ ಮೊದಲಾದವರು ಉಪಸ್ಥಿತರಿದ್ದರು.
ಲೋಲಾಕ್ಷಿ ಕೆ. ಮತ್ತು ರೂಪಶ್ರೀ ಪ್ರಾರ್ಥಿಸಿ, ದಾರುಲ್ ಅಶ್ ಅರಿಯಾ ಆಂಗ್ಲ ಮಾಧ್ಯಮ ಶಾಲೆ ಸುರಿಬೈಲು ಮುಖ್ಯ ಶಿಕ್ಷಕ ಶಫೀಕ್ ಡಿ.ಬಿ ಸ್ವಾಗತಿಸಿ, ಬೋಳಂತೂರು ಶಾಲಾ ಮುಖ್ಯ ಶಿಕ್ಷಕಿ ಗೀತಾ ಎಸ್. ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ಪಂದ್ಯಾಟದಲ್ಲಿ 17 ವರ್ಷ ವಯೋಮಿತಿ ಬಾಲಕರ ವಿಭಾಗದ ಪ್ರಥಮ ಬಾಲವಿಕಾಸ ಆಂಗ್ಲಮಾಧ್ಯಮ ಮಾಣಿ ದ್ವಿತೀಯ ಶ್ರೀರಾಮ ಆಂಗ್ಲಮಾಧ್ಯಮ ಶಾಲೆ ಕಲ್ಲಡ್ಕ ಬಾಲಕಿಯರ ವಿಭಾಗ ಪ್ರಥಮ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ದ್ವಿತೀಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಮಾಣಿ , 14 ವರ್ಷ ವಯೋಮಿತಿ ಬಾಲಕರ ವಿಭಾಗ ಪ್ರಥಮ ಬಾಲವಿಕಾಸ ಆಂಗ್ಲ ಮಾಧ್ಯಮ ಮಾಣಿ ದ್ವಿತೀಯ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ,ಬಾಲಕಿಯರ ವಿಭಾಗದಲ್ಲಿ ಪ್ರಥಮ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ದ್ವಿತೀಯ ಶ್ರೀರಾಮಚಂದ್ರ ಪೌಢಶಾಲೆ ಪೆರ್ನೆ ಜಯಗಳಿಸಿ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾದವು.

