ಅಳದಂಗಡಿ : ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ ಪ್ರತೀ ವರ್ಷ ಉಚಿತವಾಗಿ ನೀಡುವ ಪುಸ್ತಕ ವಿತರಣಾ ಸಮಾರಂಭ ಮತ್ತು ಶಿವಪ್ರಸಾದ್ ಅಜಿಲರಿಗೆ ಪೌರ ಸನ್ಮಾನ ಪೂರ್ವಭಾವಿ ಸಭೆ ಜೂನ್ 1 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ವಹಿಸಿದ್ದರು.
ವೇದಿಕೆಯಲ್ಲಿ ಪೌರ ಸನ್ಮಾನ ಸಮಿತಿಯ ಅಧ್ಯಕ್ಷರಾದ ಎಂ.ಗಂಗಾಧರ ಮಿತ್ತಮಾರು, ಶಿವಪ್ರಸಾದ್ ಅಜಿಲರು ಉಪಸ್ಥಿತರಿದ್ದು ಮಾಹಿತಿ ಹಂಚಿಕೊಂಡರು.
ಸಭೆಯಲ್ಲ ಹಿರಿಯರಾದ ಸೋಮನಾಥ ಮಯ್ಯ, ಭರತೇಶ್ ವಿ, ಡಾ ಎನ್.ಎಂ ತುಳುಪುಳೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ರಾಜಶೇಖರ ಶೆಟ್ಟಿ, ನ್ಯಾಯವಾದಿ ಅಜಿತ್ ಕುಮಾರ್ ನಾವರ, ಸದಾನಂದ ಪೂಜಾರಿ ಉಂಗಿಲಬೈಲ್, ಸುಪ್ರೀತ್ ಜೈನ್, ರತ್ನರಾಜ ಜೈನ್ ಪಿಲ್ಯ, ಮೋಹನ್ ಎ.ದಾಸ್ ಅಳದಂಗಡಿ, ಗ್ರಾ.ಪಂ ಸದಸ್ಯರಾದ ಕೃಷ್ಣಪ್ಪ ಪೂಜಾರಿ , ಸಂತೋಷ್ ಹೆಗ್ಡೆ ಕಟ್ಟೆ, ಶಿಕ್ಷಕರಾದ ನಾಗಭೂಷಣ್, ಶಿಕ್ಷಕಿ ಮಂಗಳ , ಬಡಗಕಾರಂದೂರು ಶಾಲೆ ಮುಖ್ಯೋಪಾಧ್ಯಾಯರಾದ ಸುರೇಶ್, ಹರಿಣಾಕ್ಷಿ ಕೆ.ಶೆಟ್ಟಿ, ಶ್ರೀರಂಗಮಯ್ಯ, ಜಗನ್ನಾಥ ಶೆಟ್ಟಿ, ಗಣೇಶ್ ದೇವಾಡಿಗ, ಧರ್ಣಪ್ಪ ದೋರಿಂಜೆ, ಯಶೋಧರ ಬಿಕ್ಕಿರ, ಸದಾನಂದ ಬಿ.ಕುದ್ಯಾಡಿ, ಕೊರಗಪ್ಪ ಕುಡ್ದಲಬೆಟ್ಟು,ಜಗದೀಶ್ ರೈ, ರಾಜೇಶ್ ಕುಲಾಲ್ ಅಧ್ಯಕ್ಷರು ತುಳುನಾಡು ಒಕ್ಕೂಟ ಬೆಳ್ತಂಗಡಿ, ಹರೀಶ್ ಕುಲಾಲ್ ಕೆದ್ದು, ಸಂತೋಷ್ ಕಟ್ಟೆ, ಮುಂತಾದ ಪ್ರಮುಖರು ಭಾಗವಹಿಸಿದ್ದರು.
ಸಮಾರಂಭ ಜೂನ್ 14 ರಂದು ಶನಿವಾರ ನಡೆಯುವುದಾಗಿ ಪ್ರಕಟಪಡಿಸಲಾಯಿತು.
ಪೌರ ಸನ್ಮಾನ ಸಮಿತಿ ಕಾರ್ಯದರ್ಶಿ ಪಿ.ಹೆಚ್.ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು.
ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಧನ್ಯವಾದ ಸಲ್ಲಿಸಿದರು.