ಕಾಂತಾವರ : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರ ಜೀವನ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಚಯಿಸುವ ಕೃತಿಯನ್ನು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಯು. ವಿಶ್ವನಾಥ ಶೆಣೈ ಅವರು ಕಾಂತಾವರ ಕನ್ನಡ ಸಂಘದಲ್ಲಿ ಬಿಡುಗಡೆ ಮಾಡಿದರು. ಕಾಸರಗೋಡಿನ ಸಾಹಿತಿ ವಿರಾಜ್ ಅಡೂರು ರಚಿಸಿದ ಈ ಕೃತಿಯು ಕಾಂತಾವರದ ಕೆ. ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದ ‘ನಾಡಿಗೆ ನಮಸ್ಕಾರ ‘ ಗ್ರಂಥ ಮಾಲೆಯ 366ನೇ ಕೃತಿಯಾಗಿ ಬೆಳಕು ಕಂಡಿದೆ. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಕಳದ ಚಾರ್ಟರ್ಡ್ ಅಕೌಂಟೆಂಟ್ ಕಮಲಾಕ್ಷ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾಡಿಗೆ ನಮಸ್ಕಾರ ಗ್ರಂಥ ಮಾಲಿಕೆಯ ಸಂಪಾದಕರಾದ ಡಾ. ಬಿ. ಜನಾರ್ದನ ಭಟ್, ನಿವೃತ್ತ ಉಪನ್ಯಾಸಕಿ ಡಾ. ಯು. ಮಹೇಶ್ವರಿ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ, ಕಾರ್ಯದರ್ಶಿ ಸದಾನಂದ ನಾರಾವಿ, ನಿವೃತ್ತ ಶಿಕ್ಷಕ ವಿಠಲ ಬೇಲಾಡಿ, ಪ್ರಾಧ್ಯಾಪಕ ಟಿ ಎ ಎನ್ ಖಂಡಿಗೆ, ಮಹಾವೀರ ಪಾಂಡಿ, ಕಾಸರಗೋಡಿನ ಕನ್ನಡ ಭವನ ಪ್ರಕಾಶನದ ಮುಖ್ಯಸ್ಥೆ ಸಂಧ್ಯಾರಾಣಿ ಟೀಚರ್, ವಾಮನ್ ರಾಯರ ಪುತ್ರ ಕಾರ್ತಿಕ್ ಕಾಸರಗೋಡು, ನಿವೃತ್ತ ಶಿಕ್ಷಕ ಶ್ರೀಹರಿ ಭಟ್ ಪೆಲ್ತಾಜೆ, ಹಿರಿಯ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಮೊದಲಾದವರು ಇದ್ದರು.. ಈ ಸಂದರ್ಭದಲ್ಲಿ ಡಾ.ಕೆ ವಾಮನ್ ರಾವ್ ಬೇಕಲ್ ದಂಪತಿಯನ್ನು ಹಾಗೂ ಕೃತಿಕಾರರಾದ ವಿರಾಜ್ ಅಡೂರು ಅವರನ್ನು ಸನ್ಮಾನಿಸಲಾಯಿತು.

