ಹೆಬ್ರಿ :ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆಯ ಅಂಗವಾಗಿ ದಿನಾಂಕ 07/09/2025 ರ ಭಾನುವಾರ ಹೆಬ್ರಿ ತಾಲೂಕು ಕಛೇರಿಯಲ್ಲಿ ಸರಕಾರದ ವತಿಯಿಂದ ಹೆಬ್ರಿ ತಾಲೂಕು ಆಡಳಿತದ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ಪೂಜಾರಿ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು ಅವರ ಜನ್ಮದಿನವನ್ನು ಸರಕಾರದ ವತಿಯಿಂದ ಆಚರಿಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ,ಮುಂದಿನ ದಿನಗಳಲ್ಲಿ ಇನ್ನೂ ಅದ್ದೂರಿಯಾಗಿ ಆಚರಿಸುವಂತಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದ ಹೆಬ್ರಿ ತಾಲೂಕು ತಹಶೀಲ್ದಾರ್ ಪ್ರಸಾದ್.ಎಸ್.ಎ. ಮಾತನಾಡಿ ನಾರಾಯಣ ಗುರುಗಳು ಒಂದು ವರ್ಗ ಅಥವ ಒಂದು ಜಾತಿಗೆ ಸೀಮಿತವಾದವರಲ್ಲ ಅವರು ಸಮಸ್ತ ಹಿಂದುಳಿದ ವರ್ಗಗಳ ಉದ್ದಾರಕ್ಕಾಗಿ ಶ್ರಮಿಸಿದವರು ಹಿಂದುಳಿದ ಸಮುದಾಯದಲ್ಲಿ ಜನಿಸಿದ ನಾರಾಯಣ ಗುರುಗಳು ಅಂದಿನ ಕಾಲದ ಅಸ್ಪೃಶ್ಯತೆಯನ್ನು ಅದರ ನೋವನ್ನು ಅನುಭವಿಸಿ ಅದನ್ನು ತೊಡೆದು ಹಾಕುವ ಸಂಕಲ್ಪ ತೊಟ್ಟು ಸಮಾನತೆ ಮತ್ತು ಸಮಾನ ಹಕ್ಕುಗಳನ್ನು ಪ್ರತಿಪಾದಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಬ್ರಿ ಪಂಚಾಯತ್ ಅಧ್ಯಕ್ಷ ತಾರಾನಾಥ ಬಂಗೇರ,ಜಿ.ಪಂ. ಮಾಜಿ ಸದಸ್ಯ ಮಂಜುನಾಥ ಪೂಜಾರಿ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ರಮೇಶ್ ಪೂಜಾರಿ ಶಿವಪುರ,ಹೆಬ್ರಿ ಬಿಲ್ಲವ ಸಂಘದ ಗೌರವ ಸಲಹೆಗಾರರಾದ ಶೀನ ಪೂಜಾರಿ ಹಾಡಿಮನೆ,ಹೆಬ್ರಿಯ ಪೊಲೀಸ್ ಠಾಣಾಧಿಕಾರಿ ರವಿ, ಬೆಳ್ವೆ ಬಿಲ್ಲವ ಸಂಘದ ಅಧ್ಯಕ್ಷ ರಾಜೀವ.ಎಸ್.ಪೂಜಾರಿ, ಶಿವಪುರ ಬಿಲ್ಲವ ಸಂಘದ ಅಧ್ಯಕ್ಷ ದೇವಾನಂದ ಪೂಜಾರಿ,ಹೆಬ್ರಿಯ ಬಿಲ್ಲವ ಸಂಘದ ಕಾರ್ಯದರ್ಶಿ ಪ್ರಭಾಕರ ಪೂಜಾರಿ ಕುಚ್ಚೂರು, ಕೋಶಾಧಿಕಾರಿ ಮಹೇಶ್ ಕಾನ್ಗುಂಡಿ,ಯುವ ಘಟಕದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ,ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಮತ್ತು ಸಂಘದ ಪದಾಧಿಕಾರಿಗಳು, ತಾಲೂಕು ಕಛೇರಿಯ ಸಿಬ್ಬಂದಿಗಳು, ಹೆಬ್ರಿ ಕಾಲೇಜಿನ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
ಪ್ರಭಾಕರ ಪೂಜಾರಿ ಕುಚ್ಚೂರು ಕಾರ್ಯಕ್ರಮ ನಿರೂಪಿಸಿದರು, ನಿತೀಶ್.ಎಸ್.ಪಿ ಧನ್ಯವಾದ ತಿಳಿಸಿದರು.