ಮುಲ್ಕಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ಮುಲ್ಕಿ ನಗರ ಪಂಚಾಯತ್, ಅಧಾನಿ ಫೌಂಡೇಶನ್ ಮಂಗಳೂರು, ಕೆಮ್ರಾಲ್ ಪ್ರಾಥಮಿಕ ಅರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸ್ಥನ್ಯಪಾನ ಸಪ್ತಾಹ ಕಾರ್ಯಕ್ರಮ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ಕಾರ್ನಾಡ್ ಅಮೃತಾನಂದಮಯಿನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು
ಕಾರ್ಯಕ್ರಮವನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಸೇವನೆ ಮುಖ್ಯವಾಗಿದ್ದು, ಸ್ವಚ್ಛತೆ ಮೂಲಕ ಪರಿಸರಸ್ನೇಹಿಯಾಗಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಆರೋಗ್ಯ ನಿರೀಕ್ಷಕಿ .ರಕ್ಷಿತಾ, ಆರೋಗ್ಯ ಸುರಕ್ಷಾಧಿಕಾರಿ ಮಾರ್ಗರೆಟ್ ಎದೆಹಾಲಿನ ಮಹತ್ವ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಧಾನಿ ಸಂಸ್ಥೆಯ ಪ್ರೇಮ,ಶಿಶು ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಭಾರತಿ , ಅಂಬೇಡ್ಕರ್ ಭವನದ ಭೀಮರಾವ್ ವೇದಿಕೆಯ ಉಪಾಧ್ಯಕ್ಷ ಸಂಜೀವ, ಸಮುದಾಯ ಆರೋಗ್ಯ ಕೇಂದ್ರದ ಸಮಿತಿ ಸದಸ್ಯ ರಮೇಶ್. ಅರೋಗ್ಯ ಇಲಾಖೆಯ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು ಬಳಿಕ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿಗಳಿಂದ ಸುಮಾರು 45 ವಿವಿಧ ತಿಂಡಿ ತಿನಿಸುಗಳನ್ನು ಮಹಿಳೆಯರು ತಯಾರಿಸಿ ಉಣಬಡಿಸಲಾಯಿತು
ಅಂಗನವಾಡಿ ಕಾರ್ಯಕರ್ತೆ ಕುಸುಮ ಮತ್ತು ಸುಮತಿ ನಿರೂಪಿಸಿ, ವಂದಿಸಿದರು.