ರೇಡಿಯೊ ಮಣಿಪಾಲ್ ನಲ್ಲಿ ವೃತ್ತಿಚಿಂತನ-ಶಿಕ್ಷಣ ಮಾರ್ಗದರ್ಶನ ನೂತನ ಸರಣಿ ಕಾರ್ಯಕ್ರಮದ 3 ನೇ ಸಂಚಿಕೆ ಪ್ರಸಾರ

0
36

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್ ಸಮುದಾಯ ಬಾನುಲಿ ಕೇಂದ್ರವು ಶಾಲಾ ಶಿಕ್ಷಣ ಇಲಾಖೆ ಉಡುಪಿಜಿಲ್ಲೆ, ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಶೆಫಿನ್ಸ್ ವಿಷನ್ ಪ್ರೊ.ಉಡುಪಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ ಉಡುಪಿ ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಇವರ ಸಹಕಾರದಲ್ಲಿ ಅರ್ಪಿಸುತ್ತಿರುವ ವೃತ್ತಿಚಿಂತನ – ಶಿಕ್ಷಣ ಮಾರ್ಗದರ್ಶನ ಸರಣಿ ಕಾರ್ಯಕ್ರಮದ 3 ನೇ ಸಂಚಿಕೆ ಜನವರಿ ತಿಂಗಳ ದಿನಾಂಕ 24ರಂದು ಶನಿವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ವೃತ್ತಿಶಿಕ್ಷಣ ತರಬೇತುದಾರರಾದ ಮನೋಜ್ ಕಡಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.

ಜನವರಿ 25 ರಂದು ಮಧ್ಯಾಹ್ನ 1.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊದಲ್ಲಿ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here