ಮಂಗಳೂರು : ರಾಜ್ಯ ಸರ್ಕಾರದ ಪಾಲು ಬಂಡವಾಳ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರಿನ ಮಾಡೂರು ಶಾಖೆಯಲ್ಲಿ ಮುಂಗಾರು ಹಂಗಾಮ ಯೋಜನೆಯ ಕರಪತ್ರ ಬಿಡುಗಡೆ ಕಾರ್ಯಕ್ರಮವು ಮಾಡೂರು ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಮಳೆಗಾಲದ ಠೇವಣಿಗೆ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ನೀಡಲಾಗಿದ್ದು, ಒಂದು ವರ್ಷದ ನಿರಖು ಠೇವಣಿಗೆ ಶೇ.10 ಬಡ್ಡಿ ಹಾಗೂ ಚಿನ್ನಾಭರಣ ಪ್ರತಿ ಗ್ರಾಂ ಗೆ 7777 ರೂ. ನಷ್ಟು ಗರಿಷ್ಠ ಸಾಲ ಸೌಲಭ್ಯ,100 ಕ್ಕೆ ಕೇವಲ 85 ಪೈಸೆ ಕನಿಷ್ಠ ಬಡ್ಡಿಯ ಮಾತ್ರವಿದ್ದು, ಇದು ಗರಿಷ್ಠ ಸಾಲ -ಕನಿಷ್ಠ ಬಡ್ಡಿ ದರದ ಕೊಡುಗೆಯಾಗಿದೆ. ಕೋಟೇಕಾರು ಪಟ್ಟಣ ಪಂಚಾಯಿತಿ ಸದಸ್ಯ ಸುಜಿತ್ ಕೆ. ಪೂಜಾರಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನಿರ್ದೇಶಕ ಪೂವಪ್ಪ ಕಡಂಬಾರು, ಮಾಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ವ್ಯವಸ್ಥಾಪಕಿ ಸುಕನ್ಯಾ, ಸಿಬ್ಬಂದಿಗಳಾದ ಗಗನ್, ಯಜ್ಞೇಶ್ ಜೆ. ಮಡ್ಯಾರ್, ಗ್ರಾಹಕರಾದ ಗೋಪಾಲ ಶರ್ಮಾ ಪಿ., ಆಯಿಷಾ, ಚಿತ್ರಾ, ಶೇಖ್ ಅಬ್ದುಲ್ ಗಫರ್ ಮೊಹಮ್ಮದ್, ಪ್ರಿಯಾ, ಶಿಲ್ಪಾ, ಹಮೀದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.