ಒಂದೇ ದಿನ ಹೃದಯಾಘಾತದಿಂದ ಅಣ್ಣ – ತಮ್ಮ ಸಾವು!; ಮುಗಿಲು ಮುಟ್ಟಿದ ಆಕ್ರಂದನ

0
179

ಯಾದಗಿರಿ: ಒಂದೇ ಕುಟುಂಬದ ಇಬ್ಬರು ಸಹೋದರರು  ಹೃದಯಾಘಾತಕ್ಕೆ ಬಲಿಯಾಗಿದ್ದು, ಅಣ್ಣ ತಮ್ಮಸಾವಿನಲ್ಲೂ ಒಂದಾಗಿದ್ದಾರೆ. ಈ ಘಟನೆ ಯಾದಗಿರಿ  ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ  ನಡೆದಿದೆ. ಮೃತರನ್ನು ಶಂಶೋದ್ದೀನ್ (42) ಮತ್ತು ಇರ್ಫಾನ್ (38) ಎಂದು ಗುರುತಿಸಲಾಗಿದೆ. ಮೊದಲಿಗೆ ಅಣ್ಣ ಸಂಶುದ್ದೀನ್ ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಕೇಳಿ ತಮ್ಮ ಇರ್ಫಾನ್​​ ಗೂ ಸಹ ಹೃದಯಾಘಾತವಾಗಿದೆ. ಒಂದೇ ದಿನ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಸಂಶುದ್ದೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಟ್ಟರು. ವಿಚಾರ ತಿಳಿದು ಸಹೋದರ ಇರ್ಫಾನ್​​ ಅವರಿಗೂ ಹೃದಯಾಘಾತವಾಗಿದೆ. ತಕ್ಷಣವೇ ಸಂಬಂಧಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇಷ್ಟು ದಿನ ಜೊತೆಯಾಗಿ ಬೆಳೆದಿದ್ದ ಸಹೋದರರು ಇದೀಗ ಸಾವಿನಲ್ಲೂ ಒಂದಾಗಿದ್ದಾರೆ. ಸದ್ಯ ಇಬ್ಬರನ್ನು ಕಳೆದುಕೊಂಡಿರುವ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

LEAVE A REPLY

Please enter your comment!
Please enter your name here