ಬೆಂಗಳೂರು: ಬಹಿರ್ದೆಸೆಗೆ ಹೋಗಿದ್ದ 15 ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಬೋಳಾರೆ ಗ್ರಾಮದ ಬಳಿ ನಡೆದಿದೆ. ನಿನ್ನೆ ಮಧ್ಯಾಹ್ನ ಮನೆಯ ಸಮೀಪ ಬಹಿರ್ದೆಸೆಗೆ ಹೋಗಿದ್ದ 15 ವರ್ಷದ ಬಾಲಕಿ ಕವನಳನ್ನು ಕತ್ತು ಹಿಸಿಕಿ ಕೊಲೆ ಮಾಡಲಾಗಿದೆ. ಬಹಿರ್ದೆಸೆಗೆ ಹೋಗಿದ್ದ ಕವನ ಸಂಜೆಯಾದರೂ ಮನೆಗೆ ವಾಪಸ್ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಕವನಳ ತಂದೆ ಬೇರೊಂದು ಮದುವೆಯಾಗಿ ಬೇರೆಡೆ ವಾಸವಿದ್ದರೆ, ತಾಯಿ ಇಲ್ಲದ ಹಿನ್ನೆಲೆಯನ್ನು ಕವನ ಸಾವಿತ್ರಮ್ಮ ಎಂಬುವವರ ಜೊತೆ ವಾಸವಾಗಿದ್ದಳು. ಆದ್ರೆ, ಇದೀಗ ದುರಂತ ಸಾವು ಕಂಡಿದ್ದಾಳೆ. ಈ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

