ಒಟಿಟಿ ಜಗತ್ತಿಗೆ ಕಾಲಿಟ್ಟ ಬಿಎಸ್ಎನ್ಎಲ್, ಕೇವಲ 30 ರೂ.ಗಳ ಅಗ್ಗದ ಯೋಜನೆ ಬಿಡುಗಡೆ

0
14

ಝೀ5 ಮತ್ತು ಜಿಯೋ ಸಿನಿಮಾದಂತಹ ಒಟಿಟಿ ಅಪ್ಲಿಕೇಶನ್‌ಗಳನ್ನು ಕಡಿಮೆ ಬೆಲೆಗೆ ವೀಕ್ಷಿಸಲು ಬಯಸಿದರೆ, ಬಿಎಸ್‌ಎನ್‌ಎಲ್‌ನ ಹೊಸ ಸೇವೆಯು ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಸಿನಿಮಾ ಪ್ಲಸ್ ಎಂಬ ಒಟಿಟಿ ಬಂಡಲ್ ಯೋಜನೆಯನ್ನು ಪ್ರಾರಂಭಿಸಿದೆ, ಇದು ಕೇವಲ ರೂ. 30 ರಿಂದ ಪ್ರಾರಂಭವಾಗುತ್ತದೆ. ಇದು ಬಹು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಪ್ರವೇಶವನ್ನು ನೀಡುತ್ತದೆ. ಈ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಬಿಎಸ್‌ಎನ್‌ಎಲ್‌ ಸಿನಿಮಾ ಪ್ಲಸ್ ಒಂದು OTT ಬಂಡಲ್ ಸೇವೆಯಾಗಿದ್ದು, ಇದನ್ನು ಮೊದಲು YuppTV ಸ್ಕೋಪ್ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಸಿನಿಮಾ ಪ್ಲಸ್ ಎಂದು ಮರುನಾಮಕರಣ ಮಾಡಲಾಗಿದೆ. ಈ ಸೇವೆ ಬಿಎಸ್‌ಎನ್‌ಎಲ್‌ FTTH (ಫೈಬರ್-ಟು-ದಿ-ಹೋಮ್) ಸಂಪರ್ಕ ಹೊಂದಿರುವ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ನೀವು ಬಿಎಸ್‌ಎನ್‌ಎಲ್‌ ಫೈಬರ್ ಇಂಟರ್ನೆಟ್ ಬಳಸುತ್ತಿದ್ದರೆ ಮಾತ್ರ ನೀವು ಈ ಒಟಿಟಿ ಸೇವೆಯನ್ನು ಪಡೆಯಬಹುದು.

ಬಿಎಸ್‌ಎನ್‌ಎಲ್‌ ಸಿನಿಮಾ ಪ್ಲಸ್ ಹಲವಾರು ಚಂದಾದಾರಿಕೆ ಆಯ್ಕೆಗಳನ್ನು ನೀಡುತ್ತದೆ. ಅಗ್ಗದ ಯೋಜನೆ ತಿಂಗಳಿಗೆ ಕೇವಲ ರೂ. 30 ಆಗಿದ್ದು, ಇದು DD ಚಾನೆಲ್‌ಗಳು ಮತ್ತು Waves OTT ಗೆ ಪ್ರವೇಶವನ್ನು ನೀಡುತ್ತದೆ. ರೂ. 49, ರೂ. 199 ಮತ್ತು ರೂ. 249 ಯೋಜನೆಗಳೂ ಇವೆ.

ರೂ. 199 ಯೋಜನೆಯಲ್ಲಿ ಸೋನಿ ಲಿವ್ ಮತ್ತು ಜಿಯೋ ಹಾಟ್‌ಸ್ಟಾರ್ ಸೇರಿವೆ. ರೂ. 249 ಯೋಜನೆಯಲ್ಲಿ Zee5 ಮತ್ತು ಲಯನ್ಸ್‌ಗೇಟ್ ಪ್ಲೇನಂತಹ ಪ್ರೀಮಿಯಂ ಪ್ಲಾಟ್‌ಫಾರ್ಮ್‌ಗಳು ಸೇರಿವೆ. ಇತರೆ ಟೆಲಿಕಾಂ ಕಂಪನಿಯ ಒಟಿಟಿ ಆಫರ್​ಗಳಿಗೆ ಹೋಲಿಸಿದರೆ, ಈ ಯೋಜನೆ ಸಾಕಷ್ಟು ಕೈಗೆಟುಕುವ ಮತ್ತು ವಿವಿಧ ಬಳಕೆದಾರರ ಅಗತ್ಯಗಳನ್ನು ಪೂರೈಸಬಲ್ಲದು.

ಬಿಎಸ್​ಎನ್​ಎಲ್ ಸಿನಿಮಾ ಪ್ಲಸ್ ಅನ್ನು ಹೇಗೆ ಸಕ್ರಿಯಗೊಳಿಸುವುದು?

ಈ ಸೇವೆಯನ್ನು ಪ್ರಾರಂಭಿಸಲು, ನೀವು ಬಿಎಸ್​ಎನ್​ಎಲ್ FTTH ಸಂಪರ್ಕವನ್ನು ಹೊಂದಿರಬೇಕು. ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಯಾವುದೇ ಪ್ಯಾಕ್ ಅನ್ನು ಆಯ್ಕೆ ಮಾಡಬಹುದು. ಆಯ್ಕೆಮಾಡಿದ ಯೋಜನೆಯನ್ನು ನಿಮ್ಮ ಫೈಬರ್ ಖಾತೆಗೆ ಲಿಂಕ್ ಮಾಡಲಾಗುತ್ತದೆ. ನಂತರ ನೀವು ಬಿಎಸ್​ಎನ್​ಎಲ್ ಸಿನಿಮಾ ಪ್ಲಸ್ ಪೋರ್ಟಲ್‌ಗೆ ಲಾಗಿನ್ ಆಗಬಹುದು ಮತ್ತು ನಿಮ್ಮ ನೆಚ್ಚಿನ OTT ವಿಷಯವನ್ನು ಸ್ಟ್ರೀಮ್ ಮಾಡಬಹುದು. ಈ ಸೇವೆಯು ವಿಶೇಷವಾಗಿ ಕಡಿಮೆ-ವೆಚ್ಚದ OTT ಅನುಭವವನ್ನು ಬಯಸುವ ಬಳಕೆದಾರರಿಗಾಗಿ ಆಗಿದೆ.

ಬಿಎಸ್​ಎನ್​ಎಲ್ ತನ್ನ ಬಳಕೆದಾರರಿಗೆ ಉತ್ತಮ ಸಂಪರ್ಕವನ್ನು ಒದಗಿಸಲು, ಸುಮಾರು 100,000 ಹೊಸ 4G ಟವರ್‌ಗಳನ್ನು ಸ್ಥಾಪಿಸಿದೆ. ಕಂಪನಿಯು ಶೀಘ್ರದಲ್ಲೇ 5G ಸೇವೆಗಳನ್ನು ಪ್ರಾರಂಭಿಸಲು ಸಹ ಸಿದ್ಧತೆ ನಡೆಸುತ್ತಿದೆ.

LEAVE A REPLY

Please enter your comment!
Please enter your name here