ಮೂಡುಬಿದರೆ ಬಂಟರ ಸಂಘದ ವತಿಯಿಂದ ಅಕ್ಟೋಬರ್ 11ರಂದು ಹೋಟೆಲ್ ಪಂಚರತ್ನ ಇಂಟರ್ನ್ಯಾಷನಲ್ ನಲ್ಲಿ ಬಂಟ ಸಮಾಜ ಬಾಂಧವರ ಸಭೆ, ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಬಂಟರ ಮಾತ್ರೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಂಘಟನೆಯ ಅಗತ್ಯದ ಬಗ್ಗೆ ತಿಳಿ ಹೇಳಿದರು. ತರುವಾಯ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹಿರಿಯರ ಮಾರ್ಗದರ್ಶನದಂತೆ ನಾವೆಲ್ಲರೂ ಜವಾಬ್ದಾರಿಯಿಂದ ಕಷ್ಟಪಟ್ಟು ದುಡಿದಲ್ಲಿ, ಸೂಕ್ತ ವಿದ್ಯೆಯನ್ನು ಪಡೆದು ಮುಂದುವರಿದಲ್ಲಿ ಯಾವುದೇ ರೀತಿಯ ಸಾಧನೆಯನ್ನು ಮಾಡಲು ಸಾಧ್ಯವಿದೆ ಎಂದರು.

ಬೆಂಗಳೂರು ಸತ್ಯ ವಾಣಿ ವಿದ್ಯಾ ಸಂಸ್ಥೆಯ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಒಗ್ಗಟ್ಟಿನಿಂದ ಸಾಧನೆಯನ್ನು ಮಾಡುವ ಅಗತ್ಯವನ್ನು ತಿಳಿಸಿಕೊಟ್ಟರು.

ಇದೇ ಸಂದರ್ಭದಲ್ಲಿ ಜಯಶ್ರೀ ಅಮರನಾಥ ಶೆಟ್ಟಿ, ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಕಡಂದಲೆಯ ನಮಿ ರೈ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಭಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪಬ್ಲಿಕ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಒಟ್ಟು 425 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್ ಹೆಗ್ಡೆ, ಕಾಂತಿ ಲತಾ ಶೆಟ್ಟಿ, ಡಾ.ವಿನಯ ಕುಮಾರ್ ಹೆಗ್ಡೆ,, ದಿನಕರ ಶೆಟ್ಟಿ, ದಿವಾಕರ ಶೆಟ್ಟಿ, ಪುರುಷೋತ್ತಮಶೆಟ್ಟಿ, ಸುರೇಶ ಶೆಟ್ಟಿ, ಪ್ರೇಮನಾಥ ಮಾರ್ಲ ಹಾಜರಿದ್ದರು.


ವಿದುಷಿ ಚೈತ್ರ ಶೆಟ್ಟಿ ಸ್ವಾಗತ ನೃತ್ಯ ಪ್ರಸ್ತುತ ಪಡಿಸಿದರು. ಪ್ರಾಪ್ತಿ ಶೆಟ್ಟಿ ಪ್ರಾರ್ಥಿಸಿದರು. ಕೆ.ಎಂ.ಎಫ್.ನ ಸುಚರಿತ ಶೆಟ್ಟಿ ಸ್ವಾಗತಿಸಿದರು. ರಂಜಿತಾ ಶೆಟ್ಟಿ, ಹರಿಣಾಕ್ಷಿ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಪರಿಚಯವನ್ನು ಮಾಡಿದರು. ಶಿವ ಪ್ರಸಾದ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ವಕೀಲ ಚೇತನ್ ಕುಮಾರ್ ಶೆಟ್ಟಿ ವಂದಿಸಿದರು.

ವರದಿ ರಾಯಿ ರಾಜ ಕುಮಾರ