ಸಾಣೂರು: ಬಂಟರ ಯಾನೆ ನಾಡವರ ಸಂಘ ಸಾಣೂರು ಇದರ ದಶಮಾನೋತ್ಸವ ಸಂಭ್ರಮ ದಿನಾಂಕ 30-08-2025 ನೇ ಶನಿವಾರ ಸಂಜೆ 4.00 ಗಂಟೆಯಿಂದ ಸಾಣೂರು ಶ್ರೀ ಶಿವರಾಮ ರೈ ಕಲಾ ವೇದಿಕೆಯಲ್ಲಿ ಜರುಗಳಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಬಂಟರ ಯಾನೆ ನಾಡವರ ಸಂಘ ಸಾಣೂರು ಇದರ ಅಧ್ಯಕ್ಷರಾದ ಭಾಮಿನಿ ಏರ್ನಡ್ಕಗುತ್ತು ಶ್ರೀ ವಿಶ್ವನಾಥ್ ಬಿ. ಶೆಟ್ಟಿ ಬಂಟರೆಲ್ಲರೂ ಸಂಘಟಿತರಾಗಿ ದಶಮಾನೋತ್ಸವ ಸಂಭ್ರಮದ ಯಶಸ್ವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಮಟ್ಟದಲ್ಲಿ ನಡೆಯುವ ಆಟಿಡೊಂಜಿ ಬಂಟಕೂಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಾಣೂರು ಬಂಟ ಭಾಂಧವರ ಜೆರ್ಸಿಯನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಸುಧಾಕರ್ ಶೆಟ್ಟಿ ಓಂಕಾರ್ ಸಾಣೂರು ಅನಾವರಣಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ಶ್ರೀ ಶಂಕರ್ ಶೆಟ್ಟಿ ಉಪಾಧ್ಯಕ್ಷರುಗಳಾದ ಶ್ರೀ ಪ್ರವೀಣ್ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಪದಾಧಿಕಾರಿಗಳಾದ ಶ್ರೀ ಪ್ರಶಾಂತ್ ಶೆಟ್ಟಿ ಪ್ರಸಾದ್ ಶೆಟ್ಟಿ ಪ್ರತೀಕ್ ಶೆಟ್ಟಿ ಅಜಯ್ ಶೆಟ್ಟಿ ಪ್ರಮೋದ್ ಶೆಟ್ಟಿ ನಿತಿನ್ ಶೆಟ್ಟಿ ಆಶಿಕ್ ಶೆಟ್ಟಿ ವಿರೇಶ್ ಶೆಟ್ಟಿ ಪ್ರವೀಣ್ ಶೆಟ್ಟಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಮೋಹನ್ ಶೆಟ್ಟಿ ಸಾಣೂರು ಕಾರ್ಯಕ್ರಮ ಸಂಯೋಜಿಸಿದರು.