4 ಲಕ್ಷ ಮೌಲ್ಯದ ಚಿನ್ನದ ಸರ ಹಿಂತಿರುಗಿಸಿದ ಬಸ್ ಕಂಡಕ್ಟರ್

0
32

ಮೂಡುಬಿದಿರೆ : ಖಾಸಗಿ ಬಸ್‍ನಲ್ಲಿ ಸಿಕ್ಕ ಸುಮಾರು 4 ಲಕ್ಷ ಮೌಲ್ಯದ ಚಿನ್ನದ ಸರವನ್ನು ನಿರ್ವಾಕರೊಬ್ಬರು ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಹೋಲಿ ಹಬ್ಬದ ಪ್ರಯುಕ್ತ ಕುಂದಾಪುರದ ನಿವಾಸಿ, ನಿಟ್ಟೆ ಎಂಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಬೆಲೆಬಾಳುವ ಚಿನ್ನದ ಸರವನ್ನು ಧರಿಸಿಕೊಂಡು ಸೋಮವಾರ ಕಾಲೇಜಿಗೆ ಬಂದಿದ್ದಳು.

ಮಧ್ಯಾಹ್ನ ಕಾರ್ಕಳದಿಂದ ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಹೋಗುವ ವಿಶಾಲ್ ಬಸ್ ಹತ್ತಿ, ಪಡುಬಿದ್ರೆಯಲ್ಲಿ ಇಳಿದು ಇನ್ನೊಂದು ಬಸ್ ಹಿಡಿದು ಊರಿಗೆ ಹೋಗಿದ್ದಳು. ಮನೆಗೆ ಹೋದಾಗ ಈಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಲ್ಲೊ ಬಿದ್ದಿರುವುದು ಗಮನಕ್ಕೆ ಬಂದಿತ್ತು.

ಇತ್ತ ವಿಶಾಲ್ ಬಸ್ ಕಂಡಕ್ಟರ್ ಪಡುಮಾರ್ನಾಡಿನ ಕೋಡಿಕುಂಡಾವು ರಾಜೇಶ್ ಹೆಗ್ಡೆ ಅವರು ಬಸ್ಸಿನೊಳಗೆ ಬಿದ್ದಿದ್ದ ಚಿನ್ನದ ಸರವನ್ನು ತೆಗೆದಿಟ್ಟುಕೊಂಡು ಈ ಬಗ್ಗೆ ವಾಟ್ಸಪ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ವಿದ್ಯಾರ್ಥಿನಿಯ ಸಂಬಂಧಿಯಾಗಿರುವ ಬಸ್ಸಿನ ಟಿಕೇಟ್ ಪರಿವೀಕ್ಷಕರೊಬ್ಬರ ಮೂಲಕ ವಿಷಯವನ್ನು ವಾರೀಸುದಾರರಿಗೆ ತಿಳಿಸಿ ಖಚಿತಪಡಿಸಿಕೊಂಡ ನಂತರ ಚಿನ್ನವನ್ನು ಅವರಿಗೆ ಹಿಂತಿರುಗಿಸಲಾಗಿದೆ.

ಬಸ್ ಕಂಡಕ್ಟರ್‍ನ ಪ್ರಾಮಾಣಿಕತೆಗೆ ಸಾರ್ವಜನಿಕರ ಪ್ರಶಂಸೆ ವ್ಯಕ್ತವಾಗಿದೆ. ಕೆಲವು ವರ್ಷಗಳ ಹಿಂದೆ ಇದೇ ಕಂಡಕ್ಟರ್ ತನ್ನ ಊರಿನಲ್ಲಿ ದೊರೆತ ಚಿನ್ನದ ಸರವನ್ನು ಕೂಡ ವಾರೀಸುದಾರರಿಗೆ ಹಿಂತಿರುಗಿಸಿದ್ದರು.

LEAVE A REPLY

Please enter your comment!
Please enter your name here