ಬೈಂದೂರಿನಲ್ಲಿ ಇಂದಿನಿಂದ ನಾಯಿಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ ರೋಟರಿ ಸಮುದಾಯ ಭವನ ಬೈಂದೂರು ಇಲ್ಲಿ ಸೆಪ್ಟೆಂಬರ್ 10 ರಿಂದ 14ನೇ ತಾರೀಖಿನವರೆಗೆ ಐದು ದಿನಗಳ ಕಾಲ ಭಾರತೀಯ ತಳಿಯ ಸಾಕು ನಾಯಿಗಳಿಗೆ ಉಚಿತ ಸಂತಾನ ಹರಣ ಚಿಕಿತ್ಸೆ ಹಾಗೂ ಉಚಿತ ಲಸಿಕೆ ಕಾರ್ಯಕ್ರಮ ನಡೆಯಲಿದೆ.
ಮಧ್ವರಾಜ್ ಪ್ರಾಣಿ ಸಂತಾನ ಆರೈಕೆ ಟ್ರಸ್ಟ್ ಮತ್ತು ವರ್ಲ್ಡ್‌ವೈಡ್ ವೆಟರ್ನರಿ ಸರ್ವಿಸ್ ಇಂಡಿಯಾದ ನೇತೃತ್ವದಲ್ಲಿ ರೋಟರಿ ಕ್ಲಬ್ ಬೈಂದೂರು, ಇನ್ನರ್ ವೀಲ್ ಸಂಪೂರ್ಣ ಸಹಕಾರದೊಂದಿಗೆ ಫ್ರೊಡೊ ಫೌಂಡೇಶನ್ ಈ ಶಿಬಿರವನ್ನು ಆಯೋಜಿಸಿದೆ.
ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಮಾಡುವುದು , ಸಮುದಾಯದಲ್ಲಿ ಮಕ್ಕಳ ಮತ್ತು ಹಿರಿಯರ ಮೇಲೆ ನಾಯಿಗಳಿಂದ ಆಗಬಹುದಾದ ದಾಳಿಯನ್ನು ತಡೆಗಟ್ಟುವ ಹಾಗೂ ಭಾರತೀಯ ತಿಳಿಯ ನಾಯಿಗಳ ಆರೋಗ್ಯ ವರ್ಧನೆಗಾಗಿ ಈ ಶಿಬಿರ ಆಯೋಜಿಸಲಾಗುತ್ತಿದ್ದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಸದುಪಯೋಗಪಡಿಸಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸುತ್ತಿದ್ದೇವೆ.