ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಉಡುಪಿ ಶಾಖೆಯ 2026–27ನೇ ಸಾಲಿನ ಅಧ್ಯಕ್ಷರಾಗಿ ಸಿ.ಎ. ಎಂ. ರಾಘವೇಂದ್ರ ಮೊಗೇರಾಯ ಆಯ್ಕೆ

0
2

ಉಡುಪಿ: ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಉಡುಪಿ ಶಾಖೆಯ 2026–27ನೇ ಸಾಲಿನ ಅಧ್ಯಕ್ಷರಾಗಿ ಸಿ.ಎ. ಎಂ. ರಾಘವೇಂದ್ರ ಮೊಗೇರಾಯ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

2026–27ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಫೆ. 20ರಂದು ಕುಂಜಿಬೆಟ್ಟುವಿನ ಐಸಿಎಐ ಭವನದಲ್ಲಿ ನಡೆಯಿತು. ಸಿ.ಎ. ಎಂ. ರಾಘವೇಂದ್ರ ಮೊಗೇರಾಯ 2026–27ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಉಪಾಧ್ಯಕ್ಷರಾಗಿ ಸಿ.ಎ. ಅಶ್ವಥ್ ಜೆ ಶೆಟ್ಟಿ, ಕಾರ್ಯದರ್ಶಿಯಾಗಿ ಸಿ.ಎ. ಕೆ. ಲಕ್ಷ್ಮೀಶ ರಾವ್, ಕೋಶಾಧಿಕಾರಿಯಾಗಿ ಸಿ.ಎ. ಅರ್ಚನಾ ಆರ್. ಮಯ್ಯ, ಸಿಕಾಸ ಅಧ್ಯಕ್ಷರಾಗಿ ಸಿ.ಎ. ಮಾಧುರಿ ಪ್ರಭು ಬಿ ಜಿ ಹಾಗೂ ಸದಸ್ಯರಾಗಿ ಸಿ.ಎ. ಸೋನಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಸಿ.ಎ. ಎಂ. ರಾಘವೇಂದ್ರ ಮೊಗೇರಾಯ 2026–27ನೇ ಸಾಲಿನ ತಮ್ಮ ಕ್ರಿಯಾಯೋಜನೆಯ ಬಗ್ಗೆ ವಿವರಿಸಿದರು.

ನಿಕಟ ಪೂರ್ವ ಅಧ್ಯಕ್ಷೆ ಸಿ.ಎ. ಅರ್ಚನಾ ಆರ್. ಮಯ್ಯ ಸ್ವಾಗತಿಸಿ, ಸಿ.ಎ. ಕೆ. ಲಕ್ಷ್ಮೀಶ ರಾವ್ ವಂದಿಸಿ, ಸಿ.ಎ. ಅಶ್ವಥ್ ಜೆ ಶೆಟ್ಟಿ ನಿರೂಪಿಸಿದರು

LEAVE A REPLY

Please enter your comment!
Please enter your name here