ಛತ್ರಪತಿ ಶಿವಾಜಿ ಮಹಾರಾಜ್ ರವರ ಜಯಂತಿ ಆಚರಣೆ 

0
1
oppo_1024

ಹಾಸನ ನಗರದಲ್ಲಿರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದ ಎದುರು ಇರುವ  ಉದ್ಯಾನವನದಲ್ಲಿ ಶ್ರೀ ರಾಮ ಸೇನಾ ವತಿಯಿಂದ  ಛತ್ರಪತಿ ಶಿವಾಜಿ ಮಹಾರಾಜ್ ರವರ 396ರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದರು.  

 ಪುಷ್ಪಾರ್ಚನೆಯ ಮಾಡುವುದರ ಮುಖಾಂತರ ಜಯಂತಿ ಆಚರಣೆಗೆ  ಚಾಲನೆ ಕೊಟ್ಟು, ಅವರ ಹೆಸರಿನ ಘೋಷಣೆಯನ್ನು ಕೂಗುತ್ತಾ ಸಂಭ್ರಮಿಸಿದರು.  ನಂತರ ಛತ್ರಪತಿ ಶಿವಾಜಿ ಮಹಾರಾಜ್ ರವರು  ಹಿಂದೂ ಹೃದಯ ಸಾಮ್ರಾಟ ರಾಗಿ ಬಹಳಷ್ಟು ಸೇವೆ ಸಲ್ಲಿಸಿದ್ದಾರೆ ಇವರ ಸೇವೆಯನ್ನು  ಎಲ್ಲೂ ಸಹ ವ್ಯಕ್ತ ಪಡಿಸುತ್ತಿಲ್ಲ ಮುಂದಿನ ದಿನಗಳಲ್ಲಿ ರಸ್ತೆಗಳಿಗೆ ಇವರ ಹೆಸರುಗಳನ್ನು ಇಡುವಂತೆ ಮೇಲಾಧಿಕಾರಿಗಳಿಗೆ ಅರ್ಜಿ ನೀಡುವುದಾಗಿ  ಶ್ರೀ  ರಾಮ ಸೇನಾ ಜಿಲ್ಲಾಧ್ಯಕ್ಷರಾದ  ಧರ್ಮ ನಾಯಕ್ ರವರು  ತಿಳಿಸಿದರು. ನಂತರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಶಿವಾಜಿ ಮಹಾರಾಜರು ಇಂದಿನ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಶ್ರೀರಾಮ ಸೇನೆಯ  ಯುವಕರು  ಈ ದಿನದ ಆಚರಣೆಯನ್ನು ಮಾಡುತ್ತಿರುವುದು ಎಲ್ಲ ಯುವಕರಿಗೆ ಪ್ರೇರಣಾ ದಾಯಕವಾಗಿದ್ದು , ಸ್ಫೂರ್ತಿ ದಾಯಕವಾಗಿದೆ ಶಿವಾಜಿ ಮಹಾರಾಜ್ ರವರ  ಕಥೆಗಳನ್ನು  ಮಕ್ಕಳಿಗೆ ಹೇಳಿ ಜೀವನದ ಮೌಲ್ಯಗಳನ್ನು ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಹಿಂದುತ್ವಕ್ಕಾಗಿ ಇವರ ಸೇವೆ ಅಪಾರವಾಗಿದೆ. ಶಿಸ್ತು, ಸಂಯಮ, ಛಲದ ಬದುಕಿನ ಬಗ್ಗೆ  ಪ್ರತಿ ಮನೆಯವರು ತಿಳಿದು ಮನೆಯಲ್ಲಿ ಮಕ್ಕಳಿಗೆ ತಿಳಿಸಬೇಕು ಆಗ ಹಿಂದುತ್ವ ಉಳಿಯುತ್ತದೆ ಎಂದು ಸಾಹಿತಿ. ಶಿಕ್ಷಕಿ, ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ನ ಸಂಸ್ಥಾಪಕಿ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ತಿಳಿಸಿದರು . ನಂತರ ಶಿವಾಜಿ ರವರ  ಕಾರ್ಯವು ಅಪಾರವಾದದ್ದು . ಅವರ ಹೋರಾಟವು  ಯಾರು ಮರೆಯುವಂತಿಲ್ಲ ಎಂದು  ಸುರೇಶ್ ಗೌಡ್ರು ರಾಷ್ಟ್ರ ರಕ್ಷಣಾ ಪಡೆ ಇವರು ತಿಳಿಸಿದರು ಎಲ್ಲರೂ ಜಯಂತಿ ಆಚರಣೆ ಯನ್ನು ಸಿಹಿ ಹಂಚುವುದರ ಮುಖಾಂತರ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ   ಪುನೀತ್ ಕೆ ಕೆ ಕಾಳೆನಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರು,   ಪ್ರದೀಪ್ ಜಿಲ್ಲಾ ಉಪಾಧ್ಯಕ್ಷರು,  ಅಧ್ಯಕ್ಷ ಮಂಜುನಾಥ್ ಕೆ ಅರಕಲಗೂಡು ತಾಲೂಕು  ವಿಭಾಗ ಅಮಿತ್ ಲ್ಲಾ ಕಾರ್ಮಿಕ  ಮಂಜು ತಾಲೂಕು ಅಧ್ಯಕ್ಷರು ದೊರೆಸ್ವಾಮಿ ಜಿಲ್ಲಾ ತಾಲೂಕು ಕಾರ್ಮಿಕ, ಮೋಹಲ್ ಗೌಡ. ಕೆ. ಆರ್. ಇನ್ನು ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here