ನಾಳೆಯಿಂದ ಸಿಮೆಂಟ್ ದರ ಏರಿಕೆ ? ಒಂದು ಮೂಟೆಗೆ ₹50 ಹೆಚ್ಚಳ ಸಾಧ್ಯತೆ

0
62

ನವದೆಹಲಿ : ಇದೇ ಏ.5ರಿಂದ ದೇಶದ ಪ್ರಮುಖ ಸಿಮೆಂಟ್‌ ತಯಾರಕ ಸಂಸ್ಥೆಗಳು ಒಟ್ಟಾಗಿ ಸಿಮೆಂಟ್‌ ಬೆಲೆ ಏರಿಕೆ ಮಾಡಲು ಸಜ್ಜಾಗಿವೆ. ಮಾರ್ಚ್‌ನಲ್ಲಿ ಕಟ್ಟಡ ನಿರ್ಮಾಣ ಕುಸಿತ ಕಂಡಿದ್ದು, ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕಾರಣ ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದು, ಜೂನ್‌ ತ್ರೆ„ಮಾಸಿಕದಲ್ಲಿ ಲಾಭಾಂಶ ಕುಸಿಯುವ ಸಾಧ್ಯತೆ ಹೆಚ್ಚಿರುವ ಕಾರಣ ಸಂಸ್ಥೆಗಳು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಯುದ್ಧದಿಂದಾಗಿ ಇಂಧನ ಹಾಗೂ ಪ್ಯಾಕೇಜಿಂಗ್‌ ವೆಚ್ಚ ಗಣನೀಯ ಏರಿಕೆಯಾಗಿದ್ದು, ಮಾರ್ಚ್‌ನಲ್ಲಿ ಸಿಮೆಂಟ್‌ ಬೇಡಿಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಗಳು ಬೆಲೆಯೇರಿಕೆಗೆ ಚಿಂತನೆ ನಡೆಸಿದ್ದು, ದಕ್ಷಿಣ ಭಾರತದಲ್ಲಿ ಒಂದು ಮೂಟೆಗೆ ಸುಮಾರು 50 ರೂ., ದೇಶದ ಇನ್ನಿತರ ಭಾಗದಲ್ಲಿ ಸುಮಾರು 20-30 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.

ಪ್ರಸ್ತುತ 50 ಕೇಜಿ ತೂಕದ ಒಂದು ಸಿಮೆಂಟ್‌ ಮೂಟೆಯು 300 ರಿಂದ 500 ರೂ.ವರೆಗೆ ಲಭ್ಯವಿದೆ. ಇದಲ್ಲದೇ, 3-6 ತಿಂಗಳಲ್ಲಿ ಪೆಟ್‌ ಕೋಕ್‌ ಮತ್ತು ಕಲ್ಲಿದ್ದಲು ಬೆಲೆ ಜಾಗತಿಕವಾಗಿ ಶೇ.30 ಏರಿಕೆಯಾಗಿದ್ದು, ಸಿಮೆಂಟ್‌ ಚೀಲಗಳ ಬೆಲೆಯೂ ತಲಾ 15 ರೂ.ಗೇರಿದೆ. ಈ ಎಲ್ಲ ಕಾರಣಗಳಿಂದಾಗಿ ದರ ಏರಿಕೆಗೆ ಕಂಪನಿಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here