ಇತ್ತೀಚಿನ ದಿನಗಳಲ್ಲಿ ಸೃಜನಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿರುವ ಹಿನ್ನೆಲೆಯಲ್ಲಿ, ಇಂಟೀರಿಯರ್ ಡಿಸೈನ್ ಕರ‍್ಸ್ ವಿದ್ಯರ‍್ಥಿಗಳಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಮನೆ, ಕಚೇರಿ ಹಾಗೂ ವಾಣಿಜ್ಯ ಸ್ಥಳಗಳ ವಿನ್ಯಾಸದಲ್ಲಿ ಹೊಸತನ ತರುವ ಈ ಕರ‍್ಸ್, ವಿದ್ಯರ‍್ಥಿಗಳಿಗೆ ಸೃಜನಶೀಲತೆ ಹಾಗೂ ತಾಂತ್ರಿಕ ಜ್ಞಾನವನ್ನು ಒಟ್ಟಿಗೆ ನೀಡುತ್ತದೆ.

ಈ ಕರ‍್ಸ್ ಮೂಲಕ ಸ್ಪೇಸ್ ಪ್ಲಾನಿಂಗ್, ಲೈಟಿಂಗ್, ಕಲರ್ ಕಾಂಬಿನೇಶನ್ ಮತ್ತು ಮಟೀರಿಯಲ್ ಬಳಕೆ ಮುಂತಾದ ವಿಷಯಗಳಲ್ಲಿ ತರಬೇತಿ ಪಡೆದು, ವಿದ್ಯರ‍್ಥಿಗಳು ಉದ್ಯೋಗ ಮತ್ತು ಸ್ವಯಂ ಉದ್ಯಮದ ಹಲವಾರು ಅವಕಾಶಗಳನ್ನು ಪಡೆಯುತ್ತಾರೆ. ಈ ಅಭಿವೃಧ್ಧಿಗೋಸ್ಕರ ಅಕ್ಷಯ ಕಾಲೇಜು ವಿದ್ಯಾರ್ಥಿಗಳಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯರ‍್ಥಿಗಳಿಗೆ ಎಲೈಟ್ ಅಸೋಸಿಯೇಷನ್ ಹಾಗೂ ಭಾರತ್ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ( ಬೇಸ್), ಮಂಗಳೂರು ಜಂಟಿಯಾಗಿ ಆರಂಭಿಸಿದ ತ್ರೀಡಿಎಸ್ ಮ್ಯಾಕ್ಸ್ ಮತ್ತು ತ್ರೀಡಿ ರೆಂಡರಿಂಗ್ ಎಂಬ ವಿಷಯದಲ್ಲಿ ನಡೆದ ಕರ‍್ಯಗಾರದ ಪ್ರಮಾಣ ಪತ್ರ ವಿತರಣಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕರ‍್ಯಕ್ರಮಕ್ಕೆ ಆಗಮಿಸಿದ ಬೇಸ್ ನ ಸ್ಥಾಪಕ ನವೀನ್ ಗುರುರಾಜ್ ಶಿಕ್ಷಣದ ಜೊತೆಗೆ ಸ್ವಯಂ ಅಭಿವೃದ್ಧಿಗೆ ಒತ್ತು ಕೊಡಬೇಕಾಗಿ ಸಲಹೆ ನೀಡಿ ವಿದ್ಯರ‍್ಥಿಗಳಿಗೆ ಪ್ರಮಾಣ ಪತ್ರ ವನ್ನು ನೀಡಿ ಶುಭ ಹಾರೈಸಿದರು. ಕರ‍್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಮಾತನಾಡಿ ಸತತವಾಗಿ ಮೂರು ವರ್ಷದಿಂದ ಇಂತಹ ಸರ್ಟಿಫಿಕೇಟ್ ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ನೀಡುತಿದ್ದು ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸುವುದಾಗಿ ತಿಳಿಸಿ ವಿದ್ಯರ‍್ಥಿಗಳಿಗೆ ಹಾರೈಸಿದರು.
ಕಾಲೇಜಿನ ಉಪ ಪ್ರಾಂಶುಪಾಲರೂ, ಇಂಟೀರಿಯರ್ ಡಿಸೈನ್ ವಿಭಾಗದ ಮುಖ್ಯಸ್ಥರೂ ಆದ ರಕ್ಷಣ ಟಿ ಆರ್ ಪ್ರಾಸ್ತಾವಿಕ ನುಡಿಯನ್ನು ನುಡಿದರು. ಕಾಲೇಜಿನ ಆಡಳಿತ ಅಧಿಕಾರಿ ರ‍್ಪಿತ್ ಟಿಎ, ಬೇಸ್ ನ ಸಹ ಸಂಸ್ಥಾಪಕಿ ರ‍್ಚನಾ ಉಪಸ್ಥಿತರಿದ್ದರು. ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯರ‍್ಥಿಗಳು ಕರ‍್ಯಕ್ರಮ ನಡೆಸಿಕೊಟ್ಟರು.

