ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಉತ್ಸವ

0
143

ಮೂಡುಬಿದಿರೆ, ನ. 26: ಬುಧವಾರ ರಥೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.ಬೆಳಗ್ಗೆ ಧ್ವಜಾರೋಹಣ, ನವಕ ಕಲಶಾಭಿಷೇಕ, ಮಹಾಪೂಜೆಯಾಗಿ ಮಧ್ಯಾಹ್ನ ಮಹಾರಥೋತ್ಸವ, ಮಹಾ ಅನ್ನಸಂತರ್ಪಣೆ, ಬ್ರಾಹ್ಮಣ-ಸುಹಾಸಿನಿ ಆರಾಧನೆ, ಸಾರ್ವಜನಿಕ ಆಶ್ಲೇಷಾಬಲಿ ನಡೆದವು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಕಡಂದಲೆ ದೊಡ್ಡಮನೆ, ಸದಸ್ಯರಾದ ಕೆ.ಪಿ. ಪ್ರಕಾಶ್ ಎಲ್. ಶೆಟ್ಟಿ ಕಡಂದಲೆ ಪರಾಡಿ, ಸುದರ್ಶನ್ ಶೆಟ್ಟಿ ಕಡಂದಲೆಗುತ್ತು, ಸುಬ್ಬಯ್ಯ ಶೆಟ್ಟ ಕಡಂದಲೆ ಬಂಡಸಾಲೆ, ನಮೃತಾ ಎಸ್., ಮಾರ್ಲ ಕಡಂದಲೆ ಪರಾಡಿ, ವಿಮಲಾ ಲೀಲಾಧರ್‌ ಕಟ್ಟಪುಣಿ, ಕೇಶವ ಬಾರಬೆಟ್ಟು ಕಡಂದಲೆ, ಕೆ. ಸುಂದರ ಗೌಡ, ಪ್ರಧಾನ ಅರ್ಚಕ ರಾಘವೇಂದ್ರ ಭಟ್, ದ.ಕ. ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ ಕೆ ಪಿ ಸಂತೋಷ್ ಕುಮಾರ್ ಶೆಟ್ಟಿ ಕಡಂದಲೆ ಪರಾಡಿ ಸಹಿತ ಭಕ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here