ಮಾ.19ರಂದು ಯುಗಾದಿ ಪ್ರಯುಕ್ತ ಚಂಡಿಕಾ ಹೋಮ

0
39

ದಾವಣಗೆರೆ : ದಾವಣಗೆರೆಯ ಓಂ ಚಂಡಿಕಾ ಸೇವಾ ಟ್ರಸ್ಟ್ನಿಂದ ಮಾರ್ಚ್ 19 ರಂದು ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಯುಗಾದಿ ಅಮವಾಸ್ಯೆ ಪ್ರಯುಕ್ತ ಚಂಡಿಕಾ ಹೋಮ ಆಧ್ಯಾತ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಓಂ ಚಂಡಿಕಾ ಸೇವಾ ಟ್ರಸ್ಟ್ನ ಸಂಸ್ಥಾಪಕರಾದ ಡಾ. ಅಘೋರಿ ಚಿದಂಬರ ಯೋಗಿಯವರು ತಿಳಿಸಿದ್ದಾರೆ.

ದಾವಣಗೆರೆಯ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್‌ನಿಲ್ದಾಣದ ಹಿಂಭಾಗದ ರಸ್ತೆ, ಭಗತ್‌ಸಿಂಗ್ ನಗರದ, 1ನೇ ಮುಖ್ಯ ರಸ್ತೆ, 3ನೇ ತಿರುವಿನಲ್ಲಿ ಇರುವ ಚಂಡಿಕಾಶ್ರಮದಲ್ಲಿ ನಡೆಯುವ ಈ ಆಧ್ಯಾತ್ಮಿಕ ಪರಂಪರೆಯ ಚಂಡಿಕಾ ಹೋಮ ಆನ್‌ಲೈನ್, ಆಫ್ ಲೈನ್ ಮೂಲಕ ನಡೆಯಲಿದೆ ಎಂದು ಓಂ ಚಂಡಿಕಾ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾದ ಕೌಶಲ್ಯರವರು ಪ್ರಕಟಿಸಿದ್ದಾರೆ.

ಆಧ್ಯಾತ್ಮಿಕ ಸದ್ಭಕ್ತರು ಹೋಮ ಧ್ಯಾನಕ್ಕೆ ಹೆಸರು ನೊಂದಯಿಸಲು ಹೆಚ್ಚಿನ ಮಾಹಿತಿಗೆ 9380389236 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಓಂ ಚಂಡಿಕಾ ಸೇವಾ ಟ್ರಸ್ಟ್ನ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here